ಏರ್ ಇಂಡಿಯಾ ಅಪಘಾತದಲ್ಲಿ ಹೋಮಿಭಾಭಾ ಸಾವನ್ನಪ್ಪಿದ ಹಿಂದೆ ಸಿಐಎ ಕೈವಾಡ ಶಂಕೆ..!

Homi-Baba--01

ಮುಂಬೈ, ಜು.31-ಐವತ್ತೊಂದು ವರ್ಷಗಳ ಹಿಂದೆ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಅಮೆರಿಕದ ಗುಪ್ತಚರ ಸಂಸ್ಥೆ-ಸಿಐಎ ಕೈವಾಡ ಇರುವ ಬಗ್ಗೆ ಬಲವಾದ ಶಂಕೆ ವ್ಯಕ್ತವಾಗಿದೆ. ಭಾರತದ ಪರಮಾಣು ಕಾರ್ಯಕ್ರಮದ ಮುಖ್ಯಸ್ಥರಾಗಿದ್ದ ಡಾ. ಹೋಮಿ ಜಹಾಂಗೀರ್ ಭಾಭಾ ಈ ದುರಂತದಲ್ಲಿ ಮೃತಪಟ್ಟಿದ್ದರು. 1966ರಲ್ಲಿ ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ನಡೆಯಲ್ಲಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಭಾಭಾ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಸ್ವಿಟ್ಜರ್‍ಲೆಂಡ್ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ ಭಾಭಾ ಅವರೂ ಸೇರಿದಂತೆ 117 ಜನ ಸಾವನ್ನಪ್ಪಿದ್ದರು.

ಪತ್ರಕರ್ತ ಗ್ರೆಗರಿ ಡಗ್ಲಸ್ ಮತ್ತು ಸಿಐಎ ಅಧಿಕಾರಿ ರಾಬರ್ಟ್ ಕ್ರಾಪ್ಲೆ ಮಧ್ಯೆ ಜುಲೈ 11, 2008ರಂದು ನಡೆದಿದೆ ಎನ್ನಲಾದ ಸಂಭಾಷಣೆ ಈಗ ಹಲವಾರು ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ. ಈ ವಿವಾದಿತ ಸಂಭಾಷಣೆಯನ್ನು ಟಿಆರ್‍ಬಿನ್ಯೂಸ್.ಒಆರ್‍ಜಿ ಎಂಬ ಸುದ್ದಿ ಮಾಧ್ಯಮದಲ್ಲಿ ಮರುರೂಪಿಸಲಾಗಿದೆ. ಈ ಸಂಭಾಷಣೆಯನ್ನು ಗಮನಿಸಿದರೆ, ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಸಿಐಎ ಕೈವಾಡ ಇರುವ ಸಂಶಯ ಬಲವಾಗುತ್ತದೆ.

ಸಂಭಾಷಣೆ ಆರಂಭಿಸುವ ಸಿಬಿಐ ಅಧಿಕಾರಿ ನಮಗೊಂದು ಸಮಸ್ಯೆ ಎದುರಾಗಿದೆ. 1960ರ ವಿಷಯವಿದು. ನಿಮಗೆ ತಿಳಿದಿರುತ್ತದೆ. ಭಾರತವು ದುರಹಂಕಾರದಿಂದ ಅಣುಬಾಂಬ್ ತಯಾರಿಸಲು ಮುಂದಾಗಿತ್ತು. ಅದಕ್ಕೆ ರಷ್ಯಾ ಬೆಂಬಲವಿತ್ತು. ಆ ವ್ಯಕ್ತಿ (ಡಾ. ಹೋಮಿ ಭಾಭಾ) ತುಂಬಾ ಅಪಾಯಕಾರಿ ವ್ಯಕ್ತಿ. ಆತ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಮೃತಪಟ್ಟ. ಆತ ವಿಯೆನ್ನಾ ಸಭೆಯಲ್ಲಿ ಭಾಗವಹಿಸಿದ್ದರೆ ನಮಗೆ ಮತ್ತಷ್ಟು ಕಂಟಕವಾಗುತ್ತಿತ್ತು. ಆ ವ್ಯಕ್ತಿ ಪ್ರಯಾಣಿಸುತ್ತಿದ್ದ ಬೊಯಿಂಗ್ 77 ವಿಮಾನದ ಸರಕು ವಿಭಾಗದಲ್ಲಿಟ್ಟದ್ದ ಬಾಂಬ್ ಸ್ಫೋಟಗೊಂಡು ವಿಮಾನ ಅಪಘಾತಕ್ಕೀಡಾಯಿತು ಎಂದು ವಿವರಿಸಿದ್ದಾನೆ.
ತಮಗೆ ಮುಂದುವರಿಯಲು ಅನುಮತಿ ನೀಡಿದರೆ, ಭಾರತವು 18 ತಿಂಗಳ ಒಳಗೆ ಪರಮಾಣು ಬಾಂಬ್ ತಯಾರಿಸುವ ಸಾಮಥ್ರ್ಯ ಹೊಂದಲಿದೆ ಎಂದು 1965ರ ಅಕ್ಟೋಬರ್‍ನಲ್ಲಿ ಆಕಾಶವಾಣಿಯ ಭಾಷಣದಲ್ಲಿ ಡಾ. ಭಾಭಾ ತಿಳಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin