ಕಡಿಮೆ ಬಡ್ಡಿ ಸಾಲದ ಆಸೆಗೆ ಲಕ್ಷಾಂತರ ರೂ. ಕಳೆದುಕೊಂಡ..!

Man--01

ಮೈಸೂರು, ಜು.31-ಕಡಿಮೆ ಬಡ್ಡಿಯಲ್ಲಿ ದೊರೆಯುವ ಸಾಲದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿರುವ ಘಟನೆ ದೇವರಾಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಜಯನಗರ ವಾಸಿ ಯೋಗೀಶ್‍ಗೌಡ ಹಣ ಕಳೆದುಕೊಂಡವರು. ತಿಂಗಳ ಹಿಂದೆ ತಮ್ಮ ಮೊಬೈಲ್‍ಗೆ ಬಂದಿದ್ದ ಫೈನಾನ್ಸ್ ಕಂಪೆನಿಯೊಂದರ ಮಾಹಿತಿ ಆಧರಿಸಿ ಕಂಪೆನಿಯ ಸದಸ್ಯತ್ವ ಪಡೆದು ಕಡಿಮೆ ಬಡ್ಡಿ ದರದಲ್ಲಿ ಸಿಗುವ ಸಾಲ ಪಡೆಯಲು ಮುಂದಾಗಿದ್ದ ಯೋಗೀಶ್‍ಗೌಡನಿಗೆ 1.72 ಲಕ್ಷ ರೂ. ವಂಚಿಸಲಾಗಿದೆ.

ಯೋಗೀಶ್‍ಗೌಡ ಮೊಬೈಲ್‍ಗೆ ರಾಜಸ್ಥಾನ ಮೂಲದ ಬಾಸ್ಕೋ ಫೈನಾನ್ಸ್‍ನ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್‍ಶರ್ಮಾ ಎಂಬ ವ್ಯಕ್ತಿ ಕರೆ ಮಾಡಿ ನೀವು ನಮ್ಮ ಫೈನಾನ್ಸ್ ಕಂಪೆನಿಯಲ್ಲಿ ಸದಸ್ಯತ್ವ ಪಡೆದರೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ ಎಂದು ಹೇಳಿದ್ದರಿಂದ ಅದನ್ನು ನಂಬಿದ ಯೋಗೀಶ್ 3 ಸಾವಿರ ರೂ. ನೀಡಿ ಸದಸ್ಯತ್ವ ಪಡೆದಿದ್ದರು.

ನಂತರ 10 ಲಕ್ಷ ರೂ.ಗಳ ಸಾಲಕ್ಕಾಗಿ ಅರ್ಜಿ ಹಾಕಿದಾಗ ಇಷ್ಟು ದೊಡ್ಡ ಮೊತ್ತದ ಸಾಲಕ್ಕಾಗಿ ಇನ್ನಷ್ಟು ಹಣವನ್ನು ಖಾತೆಯಲ್ಲಿ ಠೇವಣಿ ಇಡುವಂತೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಮತ್ತೆ ನಗರದ ಸಯ್ಯಾಜಿರಾವ್ ರಸ್ತೆಯ ಎಸ್‍ಬಿಐ ಬ್ಯಾಂಕ್‍ನ ಸಿಡಿಎಂ ಯಂತ್ರದ ಮೂಲಕ 1.72 ಲಕ್ಷ ರೂ.ಗಳನ್ನು ಪಾವತಿಸಿದ್ದರು.
ಇದಾದ ನಂತರ ಸಾಲ ನೀಡುವ ಫೈನಾನ್ಸ್ ಕಂಪೆನಿಯಿಂದ ಯಾವುದೇ ದೂರವಾಣಿ ಕರೆ ಅಥವಾ ಬೇರೆ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಶ್ರೀಕಾಂತ್ ಶರ್ಮಾಗÉ ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಮೋಸ ಹೋಗಿರುವುದು ತಿಳಿದು ದೇವರಾಜ ಠಾಣೆಗೆ ದೂರು ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin