ಕುವೈತ್‍ನಲ್ಲಿ ಮೃತಪಟ್ಟ ರಾಜ್ಯದ ನಾಲ್ವರ ಮೃತದೇಹ ತವರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Kuwait--01

ಕುವೈತ್, ಜು.31-ಉದ್ಯೋಗ ಅರಸಿ ಕುವೈತ್‍ಗೆ ತೆರಳಿ ಅಲ್ಲಿ ಮೃತಪಟ್ಟ ರಾಜ್ಯದ ನಾಲ್ವರು ಸೇರಿದಂತೆ ಐವರು ಭಾರತೀಯರ ಮೃತದೇಹಗಳನ್ನು ತವರಿಗೆ ತರಲು ಇಂಡಿಯನ್ ಸೋಷಿಯಲ್ ಫೋರಂ(ಐಎಸ್‍ಎಫ್), ಕುವೈತ್‍ನ ಕರ್ನಾಟಕ ಘಟಕವು ನೆರವಾಗಿದೆ. ಮತ್ತೊಬ್ಬ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರ ವಿನಂತಿಯಂತೆ ಕುವೈತ್‍ನಲ್ಲೇ ನಡೆಸಲಾಗಿದೆ ಎಂದು ಐಎಸ್‍ಎಫ್ ಹೇಳಿದೆ.

ಬೆಂಗಳೂರು ಮೂಲದ ಎಸ್.ಪಾರ್ಥಸಾರಥಿ ಶ್ರೀನಿವಾಸ್(65) ಮತ್ತು ಖಾದರ್ ಷರೀಫ್ ಜೌಹಾರ್(64), ಕಲಬುರಗಿಯ ಸೈಯದ್ ಅಮ್ಜದ್ ಅಲಿ, ಮಂಗಳೂರಿನ ಅಬ್ದುಲ್ ಹಮೀದ್ ಉಸ್ಮಾನ್ ಹಾಗೂ ಅಸ್ಸಾಂನ ಮಹಮದ್ ಇಮ್ತಾಜ್ ಅಲಿ ಅವರ ಮೃತದೇಹಗಳನ್ನು ಅವರ ಹುಟ್ಟೂರುಗಳಿಗೆ ತಲುಪಿಸಲು ಐಎಸ್‍ಎಫ್ ಸಹಾಯ ಮಾಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin