ಗಡಿಯಲ್ಲಿ ಪಾಕ್ ಕಿರಿಕ್ : ಮತ್ತೆ ಅಪ್ರಚೋದಿತ ಗುಂಡಿನ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Firing-In-border

ಜಮ್ಮು, ಜು.31-ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶ ದಲ್ಲಿ ಪಾಕಿಸ್ತಾನ ಮತ್ತೆ ಕ್ಯಾತೆ ತೆಗೆದಿದೆ. ರಜೌರಿ ಜಿಲ್ಲೆಯ ನೌಶೇರಾ ವಲಯ, ಬಾಬಾ ಖೋರಿ ಬೆಲ್ಟ್‍ನ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ನಿನ್ನೆ ರಾತ್ರಿ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ, ಭಾರತೀಯ ಮುಂಚೂಣಿ ನೆಲೆಗಳ ಮೇಲೆ ಅಪ್ರಚೋದಿತ ದಾಳಿ ನಡೆಸಿದ್ದಾರೆ.   ನಿನ್ನೆ ರಾತ್ರಿ 10.30ರ ಸಮಯ ದಲ್ಲಿ ಹಗುರ ಶಸ್ತ್ರಾಸ್ತ್ರಗಳು ಮತ್ತು ಎಂಎಂಜಿಗಳನ್ನು(ಮೀಡಿಯಂ ಮೆಷಿನ್ ಗನ್‍ಗಳು) ಬಳಸಿ ದಾಳಿ ನಡೆಸಿದರು ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರೂ ದಿಟ್ಟ ಉತ್ತರ ನೀಡಿದ್ದಾರೆ ಎಂದು ರಜೌರಿ ಉಪ ಆಯುಕ್ತ ಶಾಹೀತ್ ಇಕ್ಬಾನ್ ಚೌಧರಿ ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಜೂನ್‍ನಿಂದ ಈವರೆಗೆ ಪಾಕಿಸ್ತಾನದಿಂದ 23 ಕದನ ವಿರಾಮಗಳು ಉಲ್ಲಂಘನೆಯಾಗಿವೆ. ಅಲ್ಲದೇ ಪಾಕಿಸ್ತಾನದ ಬ್ಯಾಟ್ ಸೇನಾ ವಿಭಾಗದಿಂದ ಒಂದು ಆಕ್ರಮಣ ಹಾಗೂ ಎರಡು ಅತಿಕ್ರಮಣ ಯತ್ನಗಳು ನಡೆದಿವೆ. ಈ ಘಟನೆಗಳಲ್ಲಿ ಮೂವರು ಯೋಧರೂ ಸೇರಿದಂತೆ ನಾಲ್ವರು ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ.  ಜುಲೈನಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆಯಿಂದ 9 ಸೈನಿಕರೂ ಸೇರಿದಂತೆ 11 ಮಂದಿ ಸಾವಿಗೀಡಾಗಿ, ಇತರ 18 ಜನರಿಗೆ ಗಾಯಗಳಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin