ದನ‌ಕರುಗಳ‌ ಕೈಕಾಲು ಮುರಿದು ಚೀಲದಲ್ಲಿ ಕಟ್ಟಿ ಕಸಾಯಿಖಾನೆಗೆ ಸಾಗಾಟ

Tumakuru--01

ತುಮಕೂರು. ಜು.31 : ತುಮಕೂರು ಜಿಲ್ಲೆ ಹುಲಿಯೂರು ದುರ್ಗದ ಸುತ್ತಮುತ್ತಲಿನ ಪ್ರದೇಶದಲ್ಲಿ ದನಗಳ ಕರುಗಳನ್ನು ಕಸಾಯಿಖಾನೆಗೆ ಸಾಗಿಸುವವರ ಸಂಖ್ಯೆ ಹೆಚ್ಚಾಗಿದೆ. ಸುತ್ತಮುತ್ತಲಿನ‌ ಹಳ್ಳಿಗಳಿಂದ ಗಂಡು ಕರುಗಳನ್ನು ಕಡಿಮೆ ದುಡ್ಡಿಗೆ ಖರೀದಿಸಿ ಅವುಗಳ ಕೈಕಾಲು ಮುರಿದು ಚೀಲದಲ್ಲಿ ಕಟ್ಟಿ ಸಾಗಿಸಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ರಾಜರೋಷವಾಗಿ ಪ್ರತಿದಿನ ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ಈ ವಿಷಯ ತಿಳಿದಿದ್ದರು ಮೌನವಾಗಿದ್ದಾರೆಂದು ಇಲ್ಲಿನ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹುಲಿಯೂರುದುರ್ಗ ಪೊಲೀಸ್ ಠಾಣೆ ಎದುರೇ ಕರುಗಳನ್ನು ಸಾಗಿಸಲಾಗುತ್ತದೆ. ಆದ್ರೆ ಈವರೆಗೂ ಯಾರನ್ನು ಬಂಧಿಸಿಲ್ಲ. ಕುಣಿಗಲ್ ತಾಲೂಕಿನ ಹಲವೆಡೆ ಈ ರೀತಿ ಕರುಗಳನ್ನು ಸಾಗಾಟ ಮಾಡಲಾಗುತ್ತಿದೆ.ಹಣ್ಣೆ ಕರುಗಳನ್ನು ಸಾಕುವ ರೈತರು, ಗಂಡು ಕರುಗಳು ನಿರುಪಯುಕ್ತ ಎಂದು ಮಾರಾಟ ಮಾಡುತ್ತಿದ್ದಾರೆ. ಕರುಗಳ ಕೈ ಕಾಲು ಮುರಿದು ಚೀಲದಲ್ಲಿ ತರುವ ದೃಶ್ಯ ನೋಡಿದ್ರೆ ಮನ ಕಲುಕುತ್ತದೆ.ಮನುಷ್ಯ ಇಷ್ಟೊಂದು ಕ್ರೊರಿಯೇ ಆನ್ನಿಸುತ್ತದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin