ನಾಪತ್ತೆಯಾಗಿದ್ದ ಶಾಸಕ ಶಿವರಾಜ್ ತಂಗಡಗಿಯವರ ಸಹೋದರ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Nagaraj-Tangadagi--01

ಮೈಸೂರು, ಜು.31- ಶಾಸಕ ಶಿವರಾಜ್ ತಂಗಡಗಿ ಸಹೋದರ ನಾಗರಾಜ್ ತಂಗಡಗಿ ಮೈಸೂರಿನಲ್ಲಿಂದು ಪತ್ತೆಯಾಗಿದ್ದಾರೆ. ಕನಕಗಿರಿ ಕ್ಷೇತ್ರದ ಶಾಸಕ ಶಿವರಾಜ್ ತಂಗಡಗಿ ಸಹೋದರ ನಾಗರಾಜ್ ತಂಗಡಗಿ ಜು.24 ರಿಂದ ಕಾಣೆಯಾಗಿದ್ದರು. ಈ ಸಂಬಂಧ ಕಾರಟಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡಿದ್ದ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ನಾಗರಾಜ್ ತಂಗಡಗಿ ಅವರನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಸಿಪಿಐ ದೀಪಕ್ ಬೂಸಾರೆಡ್ಡಿ ನೇತೃತ್ವದ ತಂಡ ಇವರನ್ನು ಪತ್ತೆ ಹಚ್ಚಿದ್ದು, ನಾಪತ್ತೆಗೆ ಕಾರಣವೇನು, ಇನ್ನಿತರ ಮಾಹಿತಿಗಳನ್ನು ಕಲೆ ಹಾಕುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin