ನೆರವಿಗೆ ಬಾರದ ಆ್ಯಂಬುಲೆನ್ಸ್, ರಸ್ತೆಯಲ್ಲೇ ಜೀವಬಿಟ್ಟ ಕೂಲಿ ಕಾರ್ಮಿಕ

ಪಿರಿಯಾಪಟ್ಟಣ,ಜು.31- ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಬಾರದೆ ಎದೆನೋವಿನಿಂದ ಬಳಲುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ತೆಲಂಗಾಣದ ಗಾಂಧಿ(55) ಎಂಬ ಕೂಲಿ ಕಾರ್ಮಿಕ ಮೃತ ದುರ್ದೈವಿ.  ಕೆಲಸಕ್ಕಾಗಿ ಆಂಧ್ರದಿಂದ ಇಲ್ಲಿಗೆ ಬಂದಿದ್ದ ಗಾಂಧಿ ತಂಬಾಕು ಕೃಷಿ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಸಹ ತಂಬಾಕು ಎಲೆಗಳ ಕ್ಯೂರಿಂಗ್ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಈತನನ್ನು ಬೆಟ್ಟದಪುರ ಆಸ್ಪತ್ರೆಗೆ ಬೈಕ್‍ನಲ್ಲಿ ಕರೆದೊಯ್ಯಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಕೂಡಲೇ ಪಿರಿಯಾಪಟ್ಟಣ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು.

ಹೀಗಾಗಿ ಆ್ಯಂಬುಲೆನ್ಸ್‍ಗೆ ಕರೆ ಮಾಡಿದರೂ ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದೆ ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಗಾಂಧಿ ಸಂಗರಶೆಟ್ಟಿ ಹಳ್ಳಿ ಬಳಿ ರಸ್ತೆಯಲ್ಲಿ ಆ್ಯಂಬುಲೆನ್ಸ್‍ಗಾಗಿ ಕಾಯುತ್ತಿದ್ದಾಗ ಮೃತಪಟ್ಟಿದ್ದಾರೆ. ಈ ಸಂಬಂಧ ಬೆಟ್ಟದಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin