ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ಬಿಬಿಎಂಪಿ ಆಯುಕ್ತರ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

BBMP--01

ಬೆಂಗಳೂರು,ಜು.31- ಸರ್ಕಾರ ಜಾರಿಗೆ ತರಲು ಮುಂದಾಗಿರುವ ಏಕರೂಪ ಬೈಲಾ ಪದ್ಧತಿ ನಗರಕ್ಕೆ ಅನ್ವಯಿಸುವುದಿಲ್ಲ. ಬೆಂಗಳೂರಿಗೆ ಪ್ರತ್ಯೇಕ ಆಕ್ಟ್ ತರಲಾಗುವುದು.   ಈ ಬಗ್ಗೆ ಜನಪ್ರನಿಧಿಗಳಿಗೆ ಆತಂಕಬೇಡ ಎಂದು ಬಿಬಿಎಂಪಿ ಆಯುಕ್ತ ಮಂಜು ನಾಥ್ ಪ್ರಸಾದ್ ಇಂದಿಲ್ಲಿ ಸ್ಪಷ್ಟಪಡಿಸಿದರು. ಪಾಲಿಕೆ ಸಭೆಯಲ್ಲಿ ಪ್ರತಿಪಕ್ಷ ನಾಯಕ ಮಂಜುನಾಥ್ ರೆಡ್ಡಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ ಆಯುಕ್ತರು ಮಾತನಾಡುತ್ತಿದ್ದರು. ಬೆಂಗಳೂರಿಗೆ ರಾಜ್ಯ ಸರ್ಕಾರ ಏಕರೂಪ ಕಟ್ಟಡ ಬೈಲಾ, ವಲಯ ನಿಯಂತ್ರಣಾಧಿಕಾರವನ್ನು ಜಾರಿಗೆ ತರುತ್ತಿದೆ. ಸಾಮಾನ್ಯ ಬೈಲಾ ಪದ್ಧತಿ ಜಾರಿಗೆ ತರುವ ನಿರ್ಧಾರವನ್ನು ಬಿಡಿಎಗೆ ವಹಿಸಲಾಗಿದೆ. ಆದರೆ ಅದೇ ಅಂತಿಮವಲ್ಲ. ಆ ಬೈಲಾ ಕುರಿತಂತೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಅನುಮೋದನೆ ಪಡೆಯಲಾಗುವುದು ಎಂದು ಹೇಳಿದರು.

ಅದೇ ರೀತಿ ವಲಯ ನಿಯಂತ್ರಣಾಧಿಕಾರವನ್ನು ಕೂಡ ಸಭೆಯಲ್ಲಿ ಚರ್ಚೆ ಮಾಡಿದ ನಂತರವೇ ಚಾಲನೆ ನೀಡುತ್ತೇವೆ ಎಂದು ತಿಳಿಸಿದರು. ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ಸ್ಥಳೀಯ ಸಂಸ್ಥೆಗಳಲ್ಲಿ ಏಕರೂಪ ಬೈಲಾ ಪದ್ಧತಿ ಜಾರಿಗೆ ತರಲು ಸರ್ಕಾರ ತೀರ್ಮಾನಿಸಿದೆ. ಆದರೆ ಇದು ಬೆಂಗಳೂರಿಗೆ ಅನ್ವಯಿಸುವುದಿಲ್ಲ. ನಗರಕ್ಕೆ ಪ್ರತ್ಯೇಕ ಕಾಯ್ದೆ ತರಲಾಗುವುದು ಎಂದು ಹೇಳಿದರು.

ಸೂಪರ್‍ಸೀಡ್ ಮಾಡಿ:

ಇದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು, ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿದ್ದರೂ ಸರ್ಕಾರ ನಮ್ಮನ್ನೆಲ್ಲ ಕತ್ತಲೆಯಲ್ಲಿಟ್ಟು ಏಕರೂಪ ಕಟ್ಟಡ ಬೈಲಾ, ವಲಯ ನಿಯಂತ್ರಣಾಧಿಕಾರ ಜಾರಿಗೆ ತರಲು ಮುಂದಾಗಿದೆ. ವಲಯ ನಿಯಂತ್ರಣಾಧಿಕಾರ ಪ್ರಕಾರ 40 ಅಡಿ ರಸ್ತೆಯಲ್ಲಿ ಅಪಾರ್ಟ್‍ಮೆಂಟ್, ಸಮುದಾಯ ಭವನ, ಸ್ಟಾರ್ ಹೋಟೆಲ್ ಕಟ್ಟಲು ನೀವು ಅನುಮತಿ ಕೊಡುತ್ತಿದ್ದೀರ. ಈ ಹಿಂದೆ ನೀವೇನೆ ನ್ಯಾಯಾಲಯದ ಆದೇಶದ ಮೇರೆಗೆ ಜನವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಬಾರದೆಂದು ನೋಟಿಸ್ ನೀಡಿದ್ದೀರಾ ಮತ್ತೆ ನೀವೇ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದೀರ. ಸರ್ಕಾರದ ಈ ಧೋರಣೆ ಕೆಎಂಸಿ ಕಾಯ್ದೆ 71ಕ್ಕೆ ವಿರುದ್ಧವಾಗಿದೆ ಎಂದು ಹರಿಹಾಯ್ದರು.

ಸಿಡಿಪಿ ಮಾಸ್ಟರ್ ಪ್ಲಾನ್ ಹೊಣೆಯನ್ನು ಬೆಂಗಳೂರನ್ನು ಗುಡಿಸಿ ನುಂಗುವವರಿಗೆ ಹೊರ ಗುತ್ತಿಗೆ ನೀಡಿದ್ದೀರ. ಬೆಂಗಳೂರಲ್ಲೇ 28 ಎಂಎಲ್‍ಎಗಳಿದ್ದಾರೆ. ಐದು ಎಂಪಿಗಳಿದ್ದಾರೆ. 198 ಕಾರ್ಪೊರೇಟರ್ ಗಳಿದ್ದಾರೆ. ಆದರೆ ಇವರ್ಯಾರ ಬಳಿಯೂ ಚರ್ಚೆ ಮಾಡದೆಯೇ ಸರ್ಕಾರ ಕಾನೂನು ಮಾಡಲು ಮುಂದಾಗಿರುವುದು ನಮಗೆಲ್ಲ ಅವಮಾನ ಮಾಡಿದಂತೆ. ಕಾನೂನನ್ನು ಸರ್ಕಾರಗಳೇ ಮಾಡೋದಾದರೆ ನಾವೆಲ್ಲ ಏಕಿರಬೇಕು? ಬಿಬಿಎಂಪಿಯನ್ನು ಸೂಪರ್‍ಸೀಡ್ ಮಾಡಿಬಿಡಿ ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin