ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ. ಸುನೀಲ್ ಕುಮಾರ್ ಅಧಿಕಾರ ಸ್ವೀಕಾರ

Bengalur-Police

ಬೆಂಗಳೂರು, ಜು.31 : ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಟಿ. ಸುನೀಲ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.. ಈ ಮೊದಲಿದ್ದ ಪ್ರವೀಣ್ ಸೂದ್ ಅವರು ಎಡಿಜಿಪಿಯಾಗಿ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ಸ್ಥಾನಕ್ಕೆ ಟಿ. ಸುನೀಲ್ ಕುಮಾರ್ ಅವರನ್ನು ಪೊಲೀಸ್ ಆಯುಕ್ತರನ್ನಾಗಿ ನೇಮಿಸಿ ಸೋಮವಾರ ಕರ್ನಾಟಕ ಸರ್ಕಾರ  ಆದೇಶ ಹೊರಡಿಸಿತ್ತು .

ಸುನಿಲ್ ಕುಮಾರ್ ಅವರು ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಇದರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಕಮಿಷನರ್ ಹುದ್ದೆಯಿಂದ ವರ್ಗಾವಣೆಗೊಂಡಿರುವ ಪ್ರವೀಣ್ ಸೂದ್ ಅವರು ಇನ್ನು ಮುಂದೆ ಕಮ್ಯುನಿಕೇಷನ್, ಲಾಜಿಸ್ಟಿಕ್ಸ್ ಮತ್ತು ಮಾಡರ್ನೈಜೇಷನ್ ಬೆಂಗಳೂರು ಇದರ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ನಿಯಕ್ತಿಗೊಂಡಿದ್ದಾರೆ. ಇದಲ್ಲದೆ ಆಶಿತ್ ಮೋಹನ್ ಪ್ರಸಾದ್ ಅವರನ್ನು ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಭಡ್ತಿ ನೀಡಲಾಗಿದೆ. ಮತ್ತು ಬೆಂಗಳೂರು ಇಂಟಲಿಜೆನ್ಸ್ ಪೊಲೀಸ್ ಮಹಾನಿರ್ದೇಶಕರ ಹುದ್ದೆಯನ್ನು ಸ್ಥಾನಮಾನ ಹಾಗೂ ಜವಾಬ್ದಾರಿ ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರು, ಕಮಾಂಡೆಂಟ್ ಜನರಲ್, ಹೋಮ್ ಗಾರ್ಡ್ಸ್, ಎಕ್ಸ್-ಆಫಿಸಿಯೋ ಡೈರೆಕ್ಟರ್ ಅಗ್ನಿಶಾಮಕ ದಳ ಬೆಂಗಳೂರು ಇವುಗಳ ತತ್ಸಮಾನ ಸ್ಥಾನಕ್ಕೇರಿಸಿಯೂ ಕೂಡ ರಾಜ್ಯಸರಕಾರವು ಆದೇಶವನ್ನು ಹೊರಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin