ಬ್ರೇಕ್ ಫೇಲ್ ಆಗಿ ಬೇಕರಿಗೆ ನುಗ್ಗಿದ ಬಸ್, ಇಬ್ಬರು ಸಾವು

Ksu-Accident--01

ತುಮಕೂರು,ಜು.31-ಬ್ರೇಕ್ ವಿಫಲಗೊಂಡು ಖಾಸಗಿ ಬಸ್ಸೊಂದು ಬೇಕರಿಗೆ ನುಗ್ಗಿದ ಪರಿಣಾಮ ಇಬ್ಬರು ಸಾವನ್ನಪ್ಪಿ 14 ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೋಳಾಲ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಮ್ಮ(35) ,ಕುಮಾರ್ ಮೃತಪಟ್ಟ ದುರ್ದೈವಿಗಳು. ಪ್ರತಿದಿನ ಗೊರವನಹಳ್ಳಿಯಿಂದ ಬೆಂಗಳೂರಿಗೆ ಕೋಳಾಲ ಮಾರ್ಗವಾಗಿ ಸಂಚರಿಸುತ್ತಿದ್ದ ಖಾಸಗಿ ಬಸ್ ಕೆಟ್ಟಿದ್ದರಿಂದ ಕೋಳಾಲದಲ್ಲಿ ರಿಪೇರಿ ಮಾಡಿಸಿ ಇಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿಗೆ ಹೋಗಲು ತುಮಕೂರು ರಸ್ತೆಯಿಂದ ಬಸ್ ನಿಲ್ದಾಣಕ್ಕೆ ಬಂದಿದೆ. ಈ ವೇಳೆ ಬ್ರೇಕ್ ವಿಫಲಗೊಂಡಿದ್ದು ಎದುರಿಗಿದ್ದ ಬನಶಂಕರಿ ಬೇಕರಿಗೆ ನುಗ್ಗಿದೆ.

ಈ ವೇಳೆ ಬಸ್ಸಿನಲ್ಲಿದ್ದ ಲಕ್ಷ್ಮಮ್ಮ ಸ್ಥಳದಲ್ಲೇ ಸಾವನ್ನಪ್ಪಿದರೆ, ಬೇಕರಿ ಅಂಗಡಿ ಮಾಲೀಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೇಲಿಂದ ಮೇಲೆ ಇಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸುವಂತಾಗಲಿ ಎಂದು ಸಾರ್ವಜನಿಕರು ಆಗ್ರಹಿಸಿದರು.  ಈ ಸಂಬಂಧ ಕೋಳಾಲ ಠಾಣೆ ಇನ್‍ಸ್ಪೆಕ್ಟರ್ ಸಂತೋಷ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin