ಮೇಲುಕೋಟೆ ಚೆಲುವನಾರಾಯಣನ ವಿಗ್ರಹ ಭಗ್ನ, ಪುರಾತತ್ವ ಅಧಿಕಾರಿಗಳ ವಿರುದ್ಧ ಆಕ್ರೋಶ

Melukote--01

ಮೇಲುಕೋಟೆ, ಜು.31- ಪ್ರಸಿದ್ಧ ಚೆಲುವನಾರಾಯಣಸ್ವಾಮಿ ದೇಗುಲದ ಮಹಾದ್ವಾರದ ಹೊಸ್ತಿಲಿನಲ್ಲಿದ್ದ ವಿಗ್ರಹ ಭಗ್ನ ಮಾಡಿ, ತುಂಡಾದ ಕಲ್ಲಿನ ಭಾಗವನ್ನು ಮೇಣದಿಂದ ಅಂಟಿಸಿದ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳ ಕಾನೂನು ವಿರೋಧಿ ನಡವಳಿಕೆಗೆ ಜಿಲ್ಲಾ ಪಂಚಾಯತ್ ಸದಸ್ಯ ಎಚ್. ತ್ಯಾಗರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ದೇವಾಲಯದ ವಿಗ್ರಹ ಭಗ್ನಗೊಂಡಿರುವ ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದಾಗ ವಿಗ್ರಹವನ್ನು ಮೇಣಮೆತ್ತಿ ಅಂಟಿಸಿದ್ದನ್ನು ವೀಕ್ಷಿಸಿದ ಅವರು, ಘಟನೆ ನಡೆದ ನಂತರ ಜಿಲ್ಲಾಧಿಕಾರಿಗಳು ಹಾಗೂ ಮೇಲಧಿಕಾರಿಗಳ ಗಮನಕ್ಕೆ ತಂದು ಲಿಖಿತ ಅನುಮತಿ ಪಡೆದು ತಪ್ಪಿತಸ್ಥರ ವಿರುದ್ಧಕ್ರಮ ಜರುಗಿಸಬೇಕಿತ್ತು. ಆದರೆ ಏಕಾ ಏಕಿ ವಿಗ್ರಹ ಅಂಟಿಸಿರುವುದು ಕಾನೂನು ವಿರೋಧಿ. ಪ್ರಾಚ್ಯವಸ್ತು ಇಲಾಖೆ ನಿಯಮದಲ್ಲಿ ಇದಕ್ಕೆ ಕಾನೂನುಕ್ರಮ ಇಲ್ಲವೆ ಎಂದೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಗೊಂಡರು.

ವಿಗ್ರಹ ಭಗ್ನವಾಗಿರುವುದನ್ನು ವೀಕ್ಷಿಸಿದ ಉಧ್ಯಮಿ ಕನಗೋನಹಳ್ಳಿ ಪರಮೇಶಗೌಡ ಕೂಡ ತೀವ್ರ ಬೇಸರ ವ್ಯಕ್ತಪಡಿಸಿ, ಸಾವಿರಾರು ವರ್ಷಳಿಂದ ಸಂರಕ್ಷಿತಗೊಂಡಿರುವ ಮೇಲುಕೋಟೆ ದೇವಾಲಯದ ಸೌಂದರ್ಯವನ್ನು ಅಧಿಕಾರಿಗಳೇ ಸಂರಕ್ಷಣೆಯ ಹೆಸರಲ್ಲಿ ಹಾಳುಮಾಡುತ್ತಿದ್ದಾರೆ. ನಿರ್ಲಕ್ಷ್ಯವಹಿಸಿ ಮಹಾದ್ವಾರದ ಕೆಳಭಾಗದ ಹೊಸ್ತಿಲಿನ ಮಹಾರಾಜರ ವಿಗ್ರವನ್ನೂ ಭಿನ್ನಮಾಡಿದ್ದಾರೆ ಎಂದು ಹೇಳಿದರು.

ಜನಪ್ರತಿನಿಧಿಗಳು, ನಾಗರೀಕರ ಮಾತಿಗೆ ಮನ್ನಣೆ ನೀಡದೆ, ಪುರಾತತ್ವ ನಿಯಮ ಉಲ್ಲಂಘಿಸಿ ಮಾಡಿರುವ ಕಾಮಗಾರಿಯನ್ನು ಕಿತ್ತುಹಾಕೋಣ ನಮ್ಮನ್ನು ಜೈಲಿಗೆ ಕಳುಹಿಸಿದರೂ ಪರವಾಗಿಲ್ಲ ಎಂದು ತಾ.ಪಂ ಸದಸ್ಯ ರಾಮೇಗೌಡ ಆಕ್ರೋಶವ್ಯಕ್ತಪಡಸಿದರು.  ದೇವಾಲಯದ ಸುತ್ತ ಅನಗತ್ಯವಾಗಿ ಮಾಡುತ್ತಿರುವ ಕಾಮಗಾರಿಯನ್ನು ಶಾಸಕರು ಬಂದು ಪರಿಶೀಲನೆ ಮಾಡುವರೆಗಾದರೂ ಸ್ಥಗಿತಗೊಳಿಸಬೇಕೆಂದು ತಾಕೀತು ಮಾಡಿದರು. ಆದರೆ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಮಾತ್ರ ಯಾರ ಮನವಿಯನ್ನೂ ಪುರಸ್ಕರಸದೆ ಕಟ್ಟಡ ಕಾಮಗಾರಿ ಮುಂದುವರೆಸಲು ತಮಿಳುನಾಡು ಮೂಲದ ಗುತ್ತಿಗೆದಾರರಿಗೆ ಸಹಕಾರ ನೀಡಿದರು. ಪಾಂಡವಪುರ ತಾ.ಪಂ ಸದಸ್ಯ ನ್ಯಾಮನಹಳ್ಳಿ ರಾಮೇಗೌಡ, ಮೇಲುಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಮತ, ರೈತಮುಖಂಡ ರಾಮೇಗೌಡ, ಪುಳಿಯೋಗರೆ ರವಿ ಇತರರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin