ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ : ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ

Basavanna--01

ಬೆಂಗಳೂರು,ಜು.31-ಲಿಂಗಾಯಿತ ವೀರಶೈವ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಹೆಣೆದಿರುವ ತಂತ್ರಕ್ಕೆ ಬಿಜೆಪಿ ಆರ್‍ಎಸ್‍ಎಸ್ ಪ್ರತಿ ತಂತ್ರ ರೂಪಿಸಿದೆ.  ಪ್ರತ್ಯೇಕ ಧರ್ಮದ ವಿಚಾರದಲ್ಲಿ ಕಾಂಗ್ರೆಸ್‍ನ ಲಿಂಗಾಯಿತ ಸಚಿವರು ರಾಜ್ಯಾದ್ಯಂತ ಕೈಗೊಳ್ಳಲಿರುವ ಪ್ರವಾಸಕ್ಕೆ ಮುನ್ನವೇ ಬಿಜೆಪಿ ನಾಯಕರು ಪ್ರವಾಸ ಆರಂಭಿಸಲಿದ್ದು , ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮವಾಗದಂತೆ ನೋಡಿಕೊಳ್ಳಲು ಎಲ್ಲ ಮಠಾಧೀಶರನ್ನು ಒಂದುಗೂಡಿಸಲು ಬಿಜೆಪಿ ಪ್ರತಿತಂತ್ರ ಹೆಣೆದಿದೆ ಎಂದು ಬಲ್ಲಮೂಲಗಳು ತಿಳಿಸಿವೆ.

ಈ ಬಗ್ಗೆ ಆರ್‍ಎಸ್‍ಎಸ್, ಬಿಜೆಪಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಬದಲು ವಿಧಾನಸಭಾ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮಾಜಿ ಸಚಿವ ವಿ.ಸೋಮಣ್ಣ ಇದರ ನೇತೃತ್ವ ವಹಿಸಲಿದ್ದು , ಲಿಂಗಾಯಿತ ವೀರಶೈವ ಮಠಾಧೀಶರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಧರ್ಮವನ್ನು ಒಡೆಯಲು ಬಿಡದಂತೆ ನೋಡಿಕೊಳ್ಳಬೇಕೆಂದು ಆರ್‍ಎಸ್‍ಎಸ್ ಬಿಎಸ್‍ವೈಗೆ ಮನವಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸದ್ದಿಲ್ಲದೆ ಪ್ರವಾಸ ಕೈಗೊಂಡಿರುವ ಲಿಂಗಾಯಿತ ಸಮುದಾಯದ ಬಿಜೆಪಿ ಮುಖಂಡರು ನಿನ್ನೆ ಸುತ್ತೂರು, ತುಮಕೂರು ಮಠಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇಂದು ಜಗದೀಶ್ ಶೆಟ್ಟರ್ ಅವರು ಉತ್ತರ ಕರ್ನಾಟಕದ ಪ್ರಮುಖ ಮಠಾಧೀಶರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿಧಾನಸಭಾ ಚುನಾವಣೆ ಕೆಲವೇ ತಿಂಗಳಲ್ಲಿ ಎದುರಾಗುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗು ಆರ್‍ಎಸ್‍ಎಸ್ ಈ ತೀರ್ಮಾನಗೊಂಡಿವೆ ಎಂದು ಹೇಳಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin