ವೀರಶೈವ ಸಮುದಾಯಕ್ಕೆ ಬೆಂಕಿ ಇಟ್ಟ ಸಿಎಂ : ರಂಭಾಪುರಿ ಶ್ರೀ ಆರೋಪ

Rambaapura-shrtee

ಚಿಕ್ಕಮಗಳೂರು, ಜು.31- ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಶೈವ ಸಮುದಾಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಗಳು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಸಮಾಜವು ಹಿಂದೂ ಧರ್ಮದ ಅಡಿಯಲ್ಲೇ ಆದಿ ಕಾಲದಿಂದಲೂ ಇದೆ. ಬಸವಣ್ಣನವರು ಹುಟ್ಟಿರುವುದಕ್ಕಿಂತ ಮೊದಲೇ ಈ ವೀರಶೈವ ಸಮಾಜವಿದೆ.

ಇಂತಹ ವೀರಶೈವ ಸಮಾಜಕ್ಕೆ ಸಿದ್ದರಾಮಯ್ಯನವರು ರಾಜಕೀಯ ಉಳುವಿಗಾಗಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಫಲವನ್ನು ಅವರು ಅನುಭವಿಸಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin