ವೆನಿಜುವೆಲಾ : ಹಿಂಸಾರೂಪ ಪಡೆದ ಪ್ರತಿಭಟನೆಯಲ್ಲಿ 10 ಮಂದಿ ನಾವು

ಈ ಸುದ್ದಿಯನ್ನು ಶೇರ್ ಮಾಡಿ

10-Killed--01

ಕಾರಾಕಾಸ್, ಜು.31-ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮ್ಯಾಡುರೋ ನೇತೃತ್ವದ ಆಡಳಿತಾರೂಢ ಸೋಷಿಯಲಿಸ್ಟ್ ಪಾರ್ಟಿ ಅಧಿಕಾರಕ್ಕೆ ಬರುವುದನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಿಳಿದ ಉದ್ರಿಕ್ತ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾಪಡೆಗಳು ನಡೆಸಿದ ಗೋಲಿಬಾರ್‍ಗೆ 10 ಮಂದಿ ಮೃತಪಟ್ಟಿದ್ದಾರೆ. ಈ ಘರ್ಷಣೆಯಲ್ಲಿ ಅನೇಕರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.  ಅಧ್ಯಕ್ಷ ನಿಕೋಲಾಸ್ ಆಡಳಿತದಲ್ಲಿ ಸಾಮಾಜಿಕ-ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ಸ್ವಜನ ಪಕ್ಷಪಾತ ಹೆಚ್ಚಾಗಿದೆ ಹಾಗೂ ರಾಜಕೀಯ ಎದುರಾಳಿಗಳನ್ನು ವ್ಯವಸ್ಥಿತವಾಗಿ ಸದೆ ಬಡಿಯಲಾಗುತ್ತಿದೆ ಎಂದು ಆರೋಪಿಸಿ ವೆನಿಜುವೆಲಾದ ಬಹುತೇಕ ಮಂದಿ ಚುನಾವಣೆಯನ್ನು ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಉದ್ರಿಕ್ತ ಪ್ರತಿಭಟನಾಕಾರರು ಮತಗಟ್ಟೆಗಳ ಮೇಲೆ ದಾಳಿ ನಡೆಸಿ ಬ್ಯಾರಿಕೇಡ್‍ಗಳನ್ನು ಧ್ವಂಸಗೊಳಿಸಿ ಹಿಂಸಾಚಾರಕ್ಕೆ ಇಳಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾಪಡೆ ಗುಂಡು ಹಾರಿಸಿದಾಗ ಕನಿಷ್ಠ ಹತ್ತು ಜನ ಮೃತಪಟ್ಟು ಅನೇಕರು ಗಾಯಗೊಂಡರು. ಈ ಘಟನೆಯಿಂದ ವೆನಿಜುಲಾ ಮೇಲೆ ಕುಪಿತಗೊಂಡಿರುವ ಅಮೆರಿಕ ನಿಕೋಲಾಸ್ ಸರ್ಕಾರ ಮೇಲೆ ಮತ್ತಷ್ಟು ಪ್ರಬಲ ಮತ್ತು ಕ್ಷಿಪ್ರ ದಿಗ್ಬಂಧನಗಳನ್ನು ಹೇರುವುದಾಗಿ ಎಚ್ಚರಿಕೆ ನೀಡಿದೆ.  ಅಧ್ಯಕ್ಷರ ದುರಾಡಳಿತ ಮತ್ತು ಜನವಿರೋಧಿ ನೀತಿ ವಿರುದ್ಧ ವೆನಿಜುವೆಲಾದ ಮತದಾರರು ದಂಗೆ ಎದ್ದಿದ್ದು. ಏಪ್ರಿಲ್‍ನಿಂದ ಭುಗಿಲೆದ್ದ ಹಿಂಸಾಚಾರ, ಘರ್ಷಣೆಯಲ್ಲಿ 122 ಮಂದಿ ಹತರಾಗಿದ್ದು, 2,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin