ನಟ ಧ್ರುವ ಶರ್ಮ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

Druva--021

ಬೆಂಗಳೂರು, ಆ.01- ಕಂಪನಿಯಲ್ಲಿ ನಷ್ಟ, ಸಾಲಬಾಧೆ ತಾಳಲಾರದೆ ಮೂಕ ಮತ್ತು ಕಿವಿ ಕೇಳದಿದ್ದರೂ ತಮ್ಮ ಅದ್ಬುತ ನಟನೆಯಿಂದ ಗಮನ ಸೆಳೆದಿದ್ದ ಪ್ರತಿಭಾವಂತ ನಟ ಮತ್ತು ಸೆಲೆಬ್ರಿಟಿ ಕ್ರಿಕೆಟ್ ಲೀಗ್(ಸಿಸಿಎಲ್)ನ ಆಟಗಾರ ಧ್ರುವ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ.   ಈ ಬಗ್ಗೆ ಧ್ರುವ ಶರ್ಮಾ ತಂದೆ ಸತೀಶ್ ಶರ್ಮಾ ರಾಜಾನಕುಂಟೆ ಪೊಲೀಸ್ ಠಾಣೆಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜುಲೈ 29 ರಂದು ಧ್ರುವ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ಕೂಡಲೆ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದು, ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.  ಸ್ನೇಹಾಂಜಲಿ, ನೀನಂದ್ರೆ ನನಗಿಷ್ಟ, ತಿಪ್ಪಾಜಿ ಸರ್ಕಲ್ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಸಿಸಿಎಲ್ ಕ್ರಿಕೆಟ್ ಟೂರ್ನಿಯ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಉಪ ನಾಯಕರಾಗಿ ಹಲವು ಪಂದ್ಯಗಳಲ್ಲಿ ಭರ್ಜರಿ ಬ್ಯಾಂಟಿಂಗ್ ನಡೆಸಿ ತಂಡವನ್ನು ಗೆಲ್ಲಿಸಿದ್ದರು. ಅಲ್ಲದೆ, ನಟ ಸುದೀಪ್ ಅವರಿಗೆ ತುಂಬಾ ಆಪ್ತರಾಗಿದ್ದರು.

ಉದ್ಯಮಿ, ನಟ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತದಿಂದ ಆಡಿದ್ದರು. ವಾಕ್-ಶ್ರವಣ ದೋಷ ದಿಂದ ಬಳಲುತ್ತಿದ್ದ ಅವರು ಚಿಕ್ಕ ವಯಸ್ಸಿನಲ್ಲೆ ಅವಮಾನ ಅನುಭವಿಸಿದ್ದರು. ಇದನ್ನೇ ಛಲವಾಗಿ ತೆಗೆದುಕೊಂಡಿದ್ದ ಅವರು, ಕನ್ನಡ ಚಿತ್ರರಂಗ ಹಾಗೂ ಸಿಸಿಎಲ್‍ನಲ್ಲಿ ತಮ್ಮ ಅದ್ಭುತ ಪ್ರತಿಭೆ ತೊರಿಸಿ ಜನರ ಹೃದಯ ಗೆದ್ದಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin