ಕೆಲಸಕ್ಕಾಗಿ ಸ್ನೇಹಿತನನ್ನೇ ಕೊಂದು ಪರಾರಿಯಾಗಿದ್ದ ಆರೋಪಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Murder-Job--01

ಬೆಂಗಳೂರು, ಆ.1- ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ತನ್ನದಾಗಿಸಿಕೊಳ್ಳುವ ಸಲುವಾಗಿ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬೆಳ್ಳಂದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಸ್ಸಾಂ ಮೂಲದ ನೋಕ ರೇ ರಯ್ಯಾಂಗ್ ಬಂಧಿತ ಆರೋಪಿ. ಅಸ್ಸೋಂ ಮೂಲದ ನಿವಾಸಿಗಳಾದ ಹಸನ್ ಅಹಮದ್ , ನೋಕಾ ರೇ ರಯ್ಯಾಂಗ್ ಮತ್ತು ದೀಪಕ್ ಛತ್ರಿ ಎಂಬ ಸ್ನೇಹಿತರು ಅಸ್ಸಾಂನಿಂದ ಬೆಂಗಳೂರಿಗೆ ಬಂದು ಹರಳೂರಿನಲ್ಲಿ ಬೇರೆ ಬೇರೆ ಕಡೆಗಳಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸವನ್ನು ಮಾಡಿಕೊಂಡಿದ್ದರು.

ಹರಳೂರಿನ ಮಸೀದಿ ಬಳಿ ಪರಿವಾರ್ ಬಿಲ್ಡರ್ಸ್‍ರವರಿಗೆ ಸೇರಿದ ಖಾಲಿ ಜಾಗದಲ್ಲಿ ದೀಪಕ್ ಛತ್ರಿ ಎಂಬಾತ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದರು. ಈತ ಕೆಲಸವನ್ನು ಬಿಟ್ಟು ಊರಿಗೆ ಹೋಗುವುದಾಗಿ ಮಾಲೀಕರಿಗೆ ಹೇಳಿ ಈ ಕೆಲಸವನ್ನು ರಯ್ಯಾಂಗ್‍ಗೆ ಕೊಡಿಸುವುದಾಗಿ ಹೇಳಿದ್ದರು. ಈ ಕೆಲಸ ಪಡೆಯಲು ಹಸನ್ ಮಹಮದ್ ಅಡ್ಡಿಯಾಗಿದ್ದನಲ್ಲದೆ ಈ ಸ್ಥಳದ ಮಾಲೀಕರೊಂದಿಗೆ ಮಾತನಾಡಿ ಇಲ್ಲಿಯೇ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುವುದಾಗಿ ಹೇಳಿಕೊಂಡಿದ್ದಾನೆ.
ಈ ವಿಷಯ ತಿಳಿದ ರಯ್ಯಾಂಗ್ ಹಸನ್, ಮಹಮದ್ ಜತೆ ಜಗಳವಾಡಿದ್ದಾನೆ. ಜು.25ರಂದು ದೀಪಕ್ ಛತ್ರಿ ಮತ್ತು ರಯ್ಯಾಂಗ್ ದೂರವಾಣಿ ಕರೆ ಮಾಡಿ ಹಸನ್ ಮಹಮದ್‍ಗೆ ಧಮ್ಕಿ ಹಾಕಿ ನೀನು ಈ ಸೆಕ್ಯುರಿಟಿ ಗಾರ್ಡ್ ಕೆಲಸದಿಂದ ದೂರವಿರುವಂತೆ ಹೇಳಿ ದೂರವಾಣಿ ಸ್ಥಗಿತಗೊಳಿಸಿದ್ದಾರೆ.

ಇಷ್ಟಕ್ಕೆ ಸುಮ್ಮನಾಗದ ಇವರಿಬ್ಬರು ಅಂದು ರಾತ್ರಿ 10 ಗಂಟೆಯಲ್ಲಿ ಮತ್ತೆ ಹಸನ್ ಮಹಮದ್‍ಗೆ ದೂರವಾಣಿ ಕರೆ ಮಾಡಿ ಆತ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಹೋಗಿ ಜಗಳವಾಡಿದ್ದು , ಈ ವೇಳೆ ಮಾತಿಗೆ ಮಾತು ಬೆಳೆದು ಈ ಮೊದಲೇ ಅಂದುಕೊಂಡಂತೆ ರಯ್ಯಾಂಗ್ ತನ್ನ ಬಳಿ ಇದ್ದ ಚಾಕುವಿನಿಂದ ಹಸನ್ ಮಹಮದ್ ಹೊಟ್ಟೆಗೆ ತಿವಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ಳಂದೂರು ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಆರೋಪಿಗಳು ಅಸ್ಸಾಂ ಮೂಲದವರೆಂಬ ಮಾಹಿತಿ ಕಲೆ ಹಾಕಿ ಅಸ್ಸಾಂಗೆ ತೆರಳಲು ತಯಾರಾಗಿದ್ದ ರಯ್ಯಾಂಗ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈಟ್‍ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ನಾರಾಯಣ ಮತ್ತು ಬೆಳ್ಳಂದೂರು ಠಾಣೆಯ ಇನ್ಸ್‍ಪೆಕ್ಟರ್ ವಿಕ್ಟರ್ ಸೈಮನ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin