ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಎಲ್‍ಇಟಿ ಕಮಾಂಡರ್ ಅಬು ದುಜಾನಾ ಫಿನಿಷ್

Abu-Dujana--01

ಶ್ರೀನಗರ, ಆ. 1- ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಬೆಳಗಿನಜಾವ ಭಾರತೀಯ ಭದ್ರತಾ ಪಡೆ ಯೋಧರು ಮತ್ತು ಉಗ್ರರ ನಡುವೆ ನಡೆದ ಭೀಕರ ಗುಂಡಿನ ಕಾಳಗದಲ್ಲಿ ಲಷ್ಕರ್-ಎ-ತಯ್ಬ (ಎಲ್‍ಇಟಿ)ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಅಬು ದುಜಾನಾ ಎಂಬ ಕಟ್ಟಾ ಉಗ್ರ ಸೇರಿದಂತೆ ಇಬ್ಬರು ನುಸುಳುಕೋರರು ಹತರಾಗಿದ್ದಾರೆ.

ದಕ್ಷಿಣ ಕಾಶ್ಮೀರ ಪುಲ್ವಾಮಾ ಜಿಲ್ಲೆ ಹಕ್ರಿಪೂರಾ ಎಂಬ ಹಳ್ಳಿಯ ಸಮೀಪ ಭಾರತೀಯ ಯೋಧರು ಮತ್ತು ಪಾಕಿಸ್ಥಾನ ಬೆಂಬಲಿತ ಉಗ್ರರ ಮಧ್ಯೆ ಮುಂಜಾನೆ ಭಾರೀ ಗುಂಡಿನ ಕಾಳಗ ನಡೆಯಿತು. ಉಗ್ರರು ಭಾರತದ ಗಡಿಯೊಳಕ್ಕೆ ನುಸುಳುವ ಪ್ರಯತ್ನದಲ್ಲಿದ್ದಾಗ ಭಾರತ ಸೈನಿಕರು ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ಗಡಿಯಲ್ಲಿ ಉಗ್ರರ ಚಲನವಲನವನ್ನು ಗಮನಿಸಿದ ಯೋಧರು ಪ್ರದೇಶವನ್ನು ಸುತ್ತುಗಟ್ಟಿದರು. ಈ ಸಂದರ್ಭ ಉಗ್ರರು ಸೇನೆ ಯೋಧರ ಮೇಲೆ ಗುಂಡು ಹಾರಿಸಲಾರಂಭಿಸಿದರು. ಬಿಎಸ್‍ಎಫ್ ಸಿಬ್ಬಂದಿ ಕೂಡ ಅವರಿಗೆ ಎದುರಾಗಿ ಗುಂಡು ಹಾರಿಸಿದರು. ಉಗ್ರರು ಮತ್ತು ಸೇನಾ ಸಿಬ್ಬಂದಿ ನಡುವೆ ಭಾರೀ ಗುಂಡಿನ ಚಕಮಕಿ ನಡೆದು ದುಜಾನಾ ಸೇರಿದಂತೆ ಇಬ್ಬರು ಬಲಿಯಾದರು.

2015ರಲ್ಲಿ ಗಡಿಯಲ್ಲಿ ಭಾರತೀಯ ಸೇನೆಯ ಮುಂಚಾಣಿ ನೆಲೆಗಳ ಮೇಲೆ ನಡೆದ ಉಗ್ರ ದಾಳಿಯಲ್ಲಿ ದುಜಾನಾ ಪ್ರಮುಖ ಪಾತ್ರ ವಹಿಸಿದ್ದ. ದುಜಾನಾ ತಲೆಗೆ ಸೇನೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇಂದು ಮಧ್ಯಾಹ್ನದ ವರೆಗೂ ಗಡಿಯಲ್ಲಿ ಗುಂಡಿನ ವಿನಿಮಯ ನಡೆದಿತ್ತು.

Facebook Comments

Sri Raghav

Admin