ಛತ್ತೀಸ್‍ಗಢದ ನಾರಾಯಣ್‍ಪುರದಲ್ಲಿ ನಾಲ್ವರು ನಕ್ಸಲರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Naxals-01

ರಾಯ್‍ಪುರ, ಆ. 1- ಛತ್ತೀಸ್‍ಗಢದ ನಾರಾಯಣ್‍ಪುರದಲ್ಲಿ ನಾಲ್ವರು ನಕ್ಸಲರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತ ನಕ್ಸಲೀಯರನ್ನು 45 ವರ್ಷದ ಮಾಲು ನೇತಮ್, 26 ವರ್ಷದ ಬೈಜೂರಾಮ್ ಗಾವ್ಡೆ, 42 ವರ್ಷದ ಅಶೀರಾಮ್ ಸಲಾಮ್, ಹಾಗೂ ಶಿವನಾಥ್ ಯಾದವ್ ಎಂದು ಗುರುತಿಸಿರುವುದಾಗಿ ನಾರಾಯಣ್‍ಪುರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಸಿಂಗ್ ತಿಳಿಸಿದಾರೆ.

ತಮಗೆ ದೊರೆತ ಖಚಿತ ಸುಳಿವನ್ನಾಧರಿಸಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ಮತ್ತು ಛತ್ತೀಸ್‍ಗಢ ಸಶಸ್ತ್ರ ದಳ ಪಡೆ ಯೋಧರು ಇವರನ್ನು ಬಂಧಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.  ಬಂಧಿತರು ಗಡಿಯಲ್ಲಿ ಠಳಾಯಿಸುತ್ತಾ ತಮ್ಮ ತಂಡದವರಿಗೆ ಪೊಲೀಸರ ಚಲನ-ವಲನ ಮತ್ತು ಸಾರಿಗೆ ಇಲಾಖೆ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದರು. ಮಾಲು ನೇತಮ್ ಪ್ರಮುಖ ನಾಯಕನಗಿದ್ದು ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ. ಇವನ ತಲೆಗೆ ಪೊಲೀಸರು ಬಹುಮಾನ ಘೋಷಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin