ಜಮೀರ್ ಹುಟ್ಟುಹಬ್ಬಕ್ಕೆ ದೇವೇಗೌಡರಿಂದ ‘ಟಾಂಗ್’ ಗಿಫ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಬೆಂಗಳೂರು, ಆ.1- ಜೆಡಿಎಸ್‍ಗೆ ಕೈಕೊಟ್ಟ ಶಾಸಕ ಜಮೀರ್ ಅಹಮ್ಮದ್‍ಖಾನ್ ಅವರ ಹುಟ್ಟುಹಬ್ಬದ ದಿನದಂದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸಖತ್ ಟಾಂಗ್ ನೀಡಿದ್ದಾರೆ.  ಜಮೀರ್ ಅಹಮ್ಮದ್ ಖಾನ್ ಅವರ ಬಲಗೈ ಭಂಟ ಇಮ್ರಾನ್‍ಪಾಷಾ ಅವರನ್ನು ದೇವೇಗೌಡರು ತಮ್ಮತ್ತ ಸೆಳೆದುಕೊಂಡಿದ್ದು, ಮುಂದಿನ ವಿಧಾನಸಭೆಯಲ್ಲಿ ಅಭ್ಯರ್ಥಿ ಮಾಡುವ ಸುಳಿವು ನೀಡಿದ್ದಾರೆ.  ಹೀಗಾಗಿ 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಜಮೀರ್ ಖಾನ್‍ಗೆ ಭಾರೀ ಶಾಕ್ ನೀಡಿದ್ದಾರೆ. ಇಮ್ರಾನ್ ಪಾಷಾ ಅವರು ಜಮೀರ್ ಅಹಮ್ಮದ್ ಖಾನ್ ಅವರ ಬಲಗೈ ಭಂಟನಾಗಿದ್ದು, ಪ್ರತಿ ಹಂತದಲ್ಲೂ ಅವರ ಜತೆಯಲ್ಲಿರುತ್ತಿದ್ದರು.

ಕಳೆದ ವರ್ಷ ಲಕ್ಷಾಂತರ ರೂ. ಖರ್ಚು ಮಾಡಿ ಇಮ್ರಾನ್‍ಖಾನ್ ಅವರು ಜಮೀರ್‍ಅಹಮ್ಮದ್ ಖಾನ್ ಅವರ ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಆದರೆ, ಈ ವರ್ಷ ಹುಟ್ಟುಹಬ್ಬದ ಕಾರ್ಯಕ್ರಮದತ್ತ ತಲೆ ಕೂಡ ಹಾಕಲಿಲ್ಲ. ಜಮೀರ್‍ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಮೆರವಣಿಗೆ ಜೆ.ಜೆ.ನಗರಕ್ಕೆ ಬಂದರೂ ಇಮ್ರಾನ್‍ಖಾನ್ ಕಾಣಿಸಿಕೊಳ್ಳಲಿಲ್ಲ. ಇಮ್ರಾನ್‍ಖಾನ್ ಅವರು ದೇವೇಗೌಡರ ಜತೆ ಮಾತುಕತೆ ನಡೆಸಿದ್ದು, ತಮಗೆ ವ್ಯಕ್ತಿ ನಿಷ್ಟೆಗಿಂತ ಪಕ್ಷ ನಿಷ್ಟೆ ಮುಖ್ಯ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದೇವೇಗೌಡರು ಮುಂದಿನ ವಿಧಾನಸಭೆಯಲ್ಲಿ ಇಮ್ರಾನ್‍ಪಾಷಾ ಅವರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಜಮೀರ್‍ಖಾನ್‍ಗೆ ದೇವೇಗೌಡರು ನೀಡುವ ಶಾಕ್ ದುಬಾರಿ ಎನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin