ದಸರಾದ ಲಾಂಛನ ಬಿಡುಗಡೆ, ಆ.17 ಕ್ಕೆ ಅರಮನೆಯಲ್ಲಿ ಆನೆಗಳಿಗೆ ಸ್ವಾಗತ

Dasara-Logo--01

ಮೈಸೂರು, ಆ.01- ಈ ಭಾರಿ ನಾಡಹಬ್ಬ ಮೈಸೂರು ದಸರಾ ಲಾಂಛನವನ್ನು ಜಿಲ್ಲ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಡುಗಡೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಮಹೋತ್ಸವ ಸೆ.21ರಿಂದ 30ರವರೆಗೆ ನಡೆಯಲಿದೆ. ಸೆ.21ರಂದು ಬೆಳಗ್ಗೆ 9ಗಂಟೆಗೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವವನ್ನು ಉದ್ಘಾಟಿಸಲಾಗುವುದು ಎಂದರು.
ದಸರಾ ಮಹೋತ್ಸವದಲ್ಲೊಂದಾದ ಗಜಪಡೆಯ ಪಯಣವು ಆ.14 ರಂದು ಹುಣಸೂರಿನ ವೀರನ ಹೊಸಹಳ್ಳಿಯಿಂದ ಆರಂಭವಾಗಲಿದ್ದು, ಆ.17ರಂದು ಮಧ್ಯಾಹ್ನ 12.05ಕ್ಕೆ ಮೈಸೂರು ಅರಮನೆಯ ಆವರಣದಲ್ಲಿ ಸ್ವಾಗತಿಸಲಾಗುವುದು ಎಂದು ಹೇಳಿದರು.

ಈ ಭಾರಿಯ ಆನೆಗಳ ಮೊದಲ ತಂಡದಲ್ಲಿ ಎರಡು ಹೊಸ ಆನೆಗಳು ಸೇರಿದಂತೆ ಒಟ್ಟು 8 ಆನೆಗಳನ್ನು ಕರೆತರಲಾಗುವುದು ಎಂದ ಅವರು, ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಇದೆ ಮೊದಲ ಭಾರಿಗೆ ಜಂಬೂಸವಾರಿ ಮೆರವಣಿಗೆಯನ್ನು ದೆಹಲಿಯಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಪೆರೇಡ್ ಮಾದರಿಯಲ್ಲಿ ಶಿಸ್ತುಬದ್ಧವಾಗಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತ 15 ಕೋಟಿ ಅನುದಾನ ಕೇಳಿದೆ. ಅಲ್ಲದೆ ಮೈಸೂರಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು 21 ಕೋಟಿ ರೂ. ಹಾಗೂ ಮೈಸೂರಿಗೆ ಬರುವ 17 ರಸ್ತೆಗಳನ್ನು ಅಭಿವೃದ್ಧಿ ಪಡಿಸಲು 117 ಕೋಟಿ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ ಎಂದು ಎಚ್.ಸಿ.ಮಹದೇವಪ್ಪ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಂದೀಪ್ ಮಾತನಾಡಿ, ದಸರಾ ವೇಳೆ ನಕಲಿ ಪಾಸ್‍ಗಳ ಹಾವಳಿ ತಡೆಗೆ ಬಾರ್‍ಕೋಟ್ ಟೀಕೆಟ್‍ಗಳನ್ನು ವಿತರಿಸಲಾಗಿತ್ತಿದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin