ಬದುಕುಳಿಯಲಿಲ್ಲ ಏಕಕಾಲದಲ್ಲಿ ಜನಿಸಿದ್ದ ನಾಲ್ಕು ಮಕ್ಕಳು

4-Dead--01

ಬಳ್ಳಾರಿ, ಆ.1-ಕಳೆದ ಶುಕ್ರವಾರ ನಾಗರಪಂಚಮಿಯಂದು ಏಕಕಾಲದಲ್ಲಿ ಜನಿಸಿದ್ದ ಚತುರ್ವಳಿ (ನಾಲ್ಕು ಮಕ್ಕಳು) ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿವೆ. ತಾಲೂಕಿನ ಎಮ್ಮೆಗನೂರು ಗ್ರಾಮದ ಗುಂಡೂರು ಹುಲಿಗೆಮ್ಮ (26) ತನ್ನ ಎರಡನೆ ಹೆರಿಗೆಯಲ್ಲಿ ಎರಡು ಗಂಡು, ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು.
ಆದರೆ ಫ್ರೀ ಮೆಚುರ್ ಡಿಲವರಿ ಮತ್ತು ಮಕ್ಕಳ ತೂಕ ಕಡಿಮೆ ಇದ್ದ ಪರಿಣಾಮ ನಾಲ್ಕೂ ಮಕ್ಕಳು ಕಳೆದ ರಾತ್ರಿ ವಿಮ್ಸ್‍ನಲ್ಲಿ ಮೃತಪಟ್ಟಿವೆ.

ವಿಮ್ಸ್ ವೈದ್ಯರು ಸುರಕ್ಷತೆ ದೃಷ್ಟಿಯಿಂದ ಮಕ್ಕಳನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿವೆ. ವೈದ್ಯರು ಸಾಕಷ್ಟು ಪ್ರಯತ್ನಿಸಿದರಾದರೂ ಮಕ್ಕಳನ್ನು ಬದುಕಿಸಲು ಸಾಧ್ಯವಾಗಿಲ್ಲ. ಏಕಕಾಲಕ್ಕೆ ಜನಿಸಿದ ನಾಲ್ಕು ಮಕ್ಕಳು ಬದುಕುಳಿಯದಿರುವುದು ವಿಪರ್ಯಾಸವಾಗಿದ್ದು, ನಾಲ್ಕು ಮಕ್ಕಳನ್ನು ಕಳೆದುಕೊಂಡ ಹುಲಿಗೆಮ್ಮ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin