ಬಿಗುವಿನ ವಾತಾವರಣದ ನಡುವೆಯೇ ಚೀನಾ ಸೇನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಧಿಕಾರಿಗಳು

ಈ ಸುದ್ದಿಯನ್ನು ಶೇರ್ ಮಾಡಿ

India--China--01

ನವದೆಹಲಿ, ಆ.1- ಕಳೆದ ಎರಡು-ಮೂರು ತಿಂಗಳಿಂದ ಸಿಕ್ಕಿಂ ಗಡಿ ಪ್ರದೇಶದಲ್ಲಿ ಮುಂದುವರಿದಿರುವ ಉಭಯ ದೇಶಗಳ(ಭಾರತ-ಚೀನಾ) ನಡುವಿನ ಬಿಕ್ಕಟ್ಟಿನ ವಾತಾವರಣದ ಮಧ್ಯೆಯೇ ಚೀನಾ ಸೇನೆಯ 90ನೆ ವಾರ್ಷಿಕೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತ, ಭೂತಾನ್ ರಾಯಭಾರಿಗಳು ಹಾಗೂ ಚೀನಾದ ಉಲ್ಲತ ರಾಜತಾಂತ್ರಿಕರು ಭಾಗವಹಿಸಿದ್ದಾರೆ. ದೆಹಲಿಯಲ್ಲಿರುವ ಪಾಕಿಸ್ಥಾನದ ರಾಯಭಾರಿ ಅಬ್ದುಲ್ ಬಸೀತ್, ಭೂತಾನಿನ ರಾಯಭಾರಿ ವೆಟ್ಸೋಪ್ ನ್ಯಾಮ್‍ಗ್ಯೇಲ್ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಪ್ರಮುಖರು. ಅದೇ ರೀತಿ ಭಾರತೀಯ ಸಶಸ್ತ್ರ ಪಡೆಗಳ ಹಿರಿಯ ಅಧಿಕಾರಿಗಳು ಕೂಡ ದೆಹಲಿಯ ಸ್ಟಾರ್ ಹೊಟೇಲ್‍ನಲ್ಲಿ ನಡೆದ ಈ ಸಮಾರಂಭದಲ್ಲಿ ಭಾಗವಹಿಸಿದರು.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‍ಎ)ಯ 90ನೆ ವಾರ್ಷಿಕೋತ್ಸವಕ್ಕೆ ಮುನ್ನ ನಡೆಯುತ್ತಿರುವ ಈ ಔತಣ ಕೂಟದಲ್ಲಿ ರಷ್ಯಾ, ಅಮೆರಿಕಗಳೂ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳ ರಾಜತಾಂತ್ರಿಕರು, ಸೇನಾ ಪಡೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರಾಖಂಡ್ ಗಡಿಯಲ್ಲಿ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ 50 ಮಂದಿ ಸೈನಿಕರು ಒಳ ನುಸುಳಿದ್ದು ಆ ರಾಜ್ಯದ ಗಡಿ ಪ್ರದೇಶದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿತ್ತು ನಂತರ ಸುಮಾರು ಎರಡು ತಾಸುಗಳ ಬಳಿಕ ಚೀನಾ ಸೈನಿಕರು ಅಲ್ಲಿಂದ ವಾಪಸಾದರು ಎಂದು ಸೇನಾ ಮೂಲಗಳು ವರದಿ ನೀಡಿದ ಬೆನ್ನಲ್ಲೇ ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಪಡೆ ಅಧಿಕಾರಿಗಳು ಭಾಗವಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin