ಮಲೆಮಹದೇಶ್ವರ ಮಾದಪ್ಪನ ಹುಡಿಯಲ್ಲಿ 1.5 ಕೋಟಿ ಕಾಣಿಕೆ ಸಂಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

Hanur--01

ಹನೂರು, ಆ.1- ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯಲ್ಲಿ ಸಾಲೂರು ಬೃಹನ್ಮಠಾಧ್ಯಕ್ಷರಾದ ಗುರುಸ್ವಾಮಿ ಅವರ ಸಮ್ಮುಖದಲ್ಲಿ ಅಪರ ಜಿಲ್ಲಾಧಿಕಾರಿ ಗಾಯಿತ್ರಿ ಅಧ್ಯಕ್ಷತೆಯಲ್ಲಿ ಹುಂಡಿ ಏಣಿಕೆ ಕಾರ್ಯ ನಡೆಯಿತು.  ಮಲೆ ಮಹದೇಶ್ವರಬೆಟ್ಟ ಪ್ರಾಧಿಕಾರ ವತಿಯಿಂದ ಪ್ರತಿ ತಿಂಗಳ ಕೊನೆಯಲ್ಲಿ ಹುಂಡಿ ಹಣ ಎಣಿಕೆ ನಡೆಯುತ್ತದೆ. ಈ ಭಾರಿ ಆಷಾಢಮಾಸ ಪೂಜೆ, ಭೀಮನ ಅಮಾವಾಸ್ಯೆ ಹಾಗೂ ವಿಶೇಷ ದಿನಗಳಂದು ಮಾದಪ್ಪನ ಸನ್ನಿಧಿಗೆ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ 1 ಕೋಟಿ 5 ಲಕ್ಷದ 762 ರೂ. ನಗದು ಮತ್ತು 40 ಗ್ರಾಂ ಚಿನ್ನ 1.5 ಗ್ರಾಂ ಬೆಳ್ಳಿ ಸಂಗ್ರಹವಾಗಿರುತ್ತದೆ.

ಹುಂಡಿ ಏಣಿಕೆ ಕಾರ್ಯ ನೂತನ ಬಸ್ ನಿಲ್ದಾಣ ಬಳಿ ಇರುವ ವಾಣಿಜ್ಯ ಸಂಕೀರ್ಣದಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ರವರಗೆ ಸಿಸಿ ಕ್ಯಾಮರ ಕಣ್ಗಾವಲಿನಲ್ಲಿ ನಡೆಯಿತ.  ಈ ವೇಳೆ ಮಲೆಮಹದೇಶ್ವರ ಕ್ಷೇತ್ರ ಪ್ರಾಧಿಕಾರದ ಅಧೀಕ್ಷಕ ಬಸವರಾಜು ಲೆಕ್ಕಾಧಿಕಾರಿ ಮಹಾದೇವಸ್ವಾಮಿ ಎಸ್‍ಬಿಐ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ ಜಿಲ್ಲಾಧಿಕಾರಿ ಕಚೇರಿಯ ದ್ವೀತಿಯ ದರ್ಜೆ ಸಹಾಯಕರು ದೇವಸ್ಥಾನದ ಸಿಬ್ಬಂದಿಗಳು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin