ಲಿಂಗಾಯಿತ-ವೀರಶೈವರ ನಡುವಿನ ಸಂಘರ್ಷದ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Basavanna----01

ಬೆಂಗಳೂರು, ಆ.1- ಲಿಂಗಾಯಿತ-ವೀರಶೈವರ ನಡುವಿನ ಸಂಘರ್ಷದಿಂದ ಪ್ರತ್ಯೇಕ ಧರ್ಮದ ಬೇಡಿಕೆಗೆ ಸ್ಪಂದಿಸುವ ಮೂಲಕ ಕಾಂಗ್ರೆಸ್ ರಾಜಕೀಯ ಲಾಭ ಪಡೆಯಲು ಭಾರೀ ತಯಾರಿ ನಡೆಸುತ್ತಿದೆ. ಕಾಂಗ್ರೆಸ್ಸಿನಲ್ಲಿರುವ ಲಿಂಗಾಯಿತ ಸಚಿವರು ಮತ್ತು ಶಾಸಕರು ಪ್ರತ್ಯೇಕ ಧರ್ಮದ ಬೇಡಿಕೆಯನ್ನು ತೀವ್ರಗೊಳಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿ ರಾಜಕೀಯ ಒತ್ತಡ ತರಲು ನಿರ್ಧರಿಸಿದ್ದು, ವರ್ಷಾಂತ್ಯದ ಒಳಗೆ ಲಿಂಗಾಯಿತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ತಂದಿದ್ದಾರೆ.

ಇದರ ಹಿಂದೆ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರ ವ್ಯಾಪಕವಾಗಿದೆ. ಕಾಂಗ್ರೆಸ್‍ಗೆ ಈವರೆಗೂ ಅಹಿಂದ ಬೆಂಬಲವಿತ್ತು. ಇದೀಗ ಲಿಂಗಾಯಿತ ಸಮುದಾಯದ ಓಲೈಕೆಗೂ ಮುಂದಾಗಿದೆ. ಬಿಎಸ್‍ವೈ ಅವರ ಬಲವಾದ ಹಿಡಿತದಿಂದ ಲಿಂಗಾಯಿತ ವೀರಶೈವ ಸಮುದಾಯವನ್ನು ಬಿಡಿಸಿಕೊಳ್ಳಲು ಪ್ರತ್ಯೇಕ ಧರ್ಮದ ಅಸ್ತ್ರ ಕಾಂಗ್ರೆಸ್‍ಗೆ ವರದಾನವಾಗಿದೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.50ರಷ್ಟು ಮತ ಪಡೆದಿತ್ತು. ಬಿಜೆಪಿ ಶೇ.37ರಷ್ಟು ಮತಪಡೆದು 40 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು. ಕಳೆದ (2008) ಚುನಾವಣೆಯಲ್ಲಿ ಗೆದ್ದಿದ್ದ 72 ಸ್ಥಾನಗಳ ಗೆದ್ದಿದ್ದ ಬಿಜೆಪಿ ಹಿನ್ನಡೆ ಸಾಧಿಸಿತ್ತು. ಕಾಂಗ್ರೆಸ್ 122 ಜಯಗಳಿಸಿ 41 ಕ್ಷೇತ್ರಗಳಲ್ಲಿ ಹೆಚ್ಚುವರಿ ಲಾಭ ಮಾಡಿಕೊಂಡಿತ್ತು. ಸಂಸತ್ ಚುನಾವಣೆಯಲ್ಲಿ ಮೋದಿ ಅಲೆಯಿಂದಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಿತ್ತು. ವಿಧಾನಸಭೆಯಲ್ಲಿ ಕೆಜೆಪಿ ಕಟ್ಟಿ ಬೇರೆ ಹೋಗಿದ್ದ ಬಿಎಸ್‍ವೈ ಲೋಕಸಭೆ ಚುನಾವಣೆಯಲ್ಲಿ ಸ್ವ ಪಕ್ಷ ಬಿಜೆಪಿಗೆ ಮರಳಿದ್ದರಿಂದ ಬಿಜೆಪಿ ಶೇ.43ರಷ್ಟು ಮತ ಪಡೆದು 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರರೆಸ್ ಶೇ.40.80ರಷ್ಟು ಮತ ಪಡೆದು 9 ಸ್ಥಾನಕ್ಕೆ ತೃಪ್ತಿಪಟ್ಟಿಕೊಳ್ಳುವಂತಾಗಿತ್ತು.

ಇದಕ್ಕೆ ಪ್ರಮುಖ ಕಾರಣ ಲಿಂಗಾಯಿತ ಮತಗಳ ಕ್ರೋಢಿಕರಣ ಎಂಬ ಅಂದಾಜುಗಳು ಕೇಳಿ ಬಂದಿದ್ದವು. ಈ ಬಾರಿ ಏನೇ ಸರ್ಕಸ್ ಮಾಡಿದರೂ ಲಿಂಗಾಯಿತ ಮತಗಳನ್ನು ಸೆಳೆಯುವುದು ಕಾಂಗ್ರೆಸ್‍ಗೆ ಕಷ್ಟವಾಗಿತ್ತು. ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಇದ್ದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ ಸಮಾವೇಶದಲ್ಲಿ ಅತ್ಯಂತ ನಿರಳವಾಗಿ ಲಿಂಗಾಯಿತ ಪ್ರತ್ಯೇಕ ಧರ್ಮದ ವಿಷಯ ಪ್ರಸ್ತಾಪಿಸಿದರು. ಅನಂತರ ಸಾರ್ವಜನಿಕ ಸಂಘರ್ಷ ಆರಂಭವಾಗಿದೆ.

ಲಿಂಗಾಯಿತ-ವೀರಶೈವರ ನಡುವೆ ಧರ್ಮಾಧರಿತವಾಗಿ ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಲಿಂಗಾಯಿತರು-ವೀರಶೈವರು ಪ್ರತ್ಯೇಕ ಎಂಬ ವಾದ ಆರಂಭವಾಗಿದೆ. ಎಲ್ಲವೂ ತಣ್ಣಗಾಗುವ ವೇಳೆಗೆ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪ್ರತ್ಯೇಕ ಧರ್ಮದ ವಿಷಯವಾಗಿ ಲಿಂಗಾಯಿತರ ಜತೆಗೂಡಲು ನಿರಾಕರಿಸಿ ಪತ್ರ ಬರೆದಿರುವುದು ಭಾರೀ ವಿವಾದವನ್ನೇ ಹುಟ್ಟುಹಾಕಿದೆ. ಈ ಪತ್ರದ ಹಿಂದೆ ಅತ್ಯಂತ ಚಾಣಾಕ್ಷ ನಡೆ ಇದೆ. ಬಿಜೆಪಿಯ ಜತೆ ಗುರುತಿಸಿಕೊಂಡಿದ್ದ ಲಿಂಗಾಯಿತ ಸಮುದಾಯದ ಶೇ.10ರಷ್ಟು ಮತಗಳನ್ನು ಸೆಳೆದುಕೊಂಡರೂ ಕಾಂಗ್ರೆಸ್‍ನ ಗೆಲುವನ್ನು ಪಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಲೆಕ್ಕಾಚಾರಗಳು ನಡೆಯಯುತ್ತಿವೆ.

ಕಾಂಗ್ರೆಸ್ ಮತ್ತು ಸರ್ಕಾರ ಪ್ರತ್ಯೇಕ ಧರ್ಮದ ಪರವಾಗಿರುವುದರಿಂದ ಸಹಜವಾಗಿಯೇ ಅಲಿಂಗಾಯಿತರು ಕಾಂಗ್ರೆಸನ್ನು ಬೆಂಬಲಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.  ಕರ್ನಾಟಕದ ರಾಜಕಾರಣದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇದ್ದು, ಎದುರಾಗಳಿಗಿಂತ ಕೇವಲ ಶೇ.2-3ರಷ್ಟು ಹೆಚ್ಚು ಮತಪಡೆದವರು ಗೆದ್ದು ಅಧಿಕಾರ ಹಿಡಿಯುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಕಳೆದ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.36.6 ಮತ ಪಡೆದಿದ್ದ ಬಿಜೆಪಿ, ಬಿಎಸ್‍ವೈ ಸೇರ್ಪಡೆ ನಂತರ ಬಲಗೊಂಡಿದ್ದು, ಲೋಕಸಭೆ 43ರಷ್ಟು ಮತ ಪಡೆದಿದ್ದ ವಿಧಾನಸಭೆ ಚುನಾವಣೆಗಿಂತಲೂ ಶೇ.6ರಷ್ಟು ಅಧಿಕ ಪ್ರಮಾಣದ ಮತಗಳಿಗೆಯಾಗಿತ್ತು.

ಈ ಅದೇ ವೇಗದಲ್ಲಿ ರಾಜಕಾರಣ ಮುಂದುವರೆಗೆ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುವ ಅನುಮ…. ದೇಶದಲ್ಲೇ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಕರ್ನಾಟಕ ರಾಜ್ಯವನ್ನು ಕಳೆದುಕೊಳ್ಳಲು ಸಿದ್ಧವಿರಲಿಲ್ಲ.  ಈ ಹಿನ್ನೆಲೆಯಲ್ಲಿ ಹಲವಾರು ಲೆಕ್ಕಾಚಾರ ನಡೆದಿದ್ದು, ಅತ್ಯಂತ ವ್ಯವಸ್ಥಿತವಾಗಿ ಧರ್ಮ ರಾಜಕಾರಣವನ್ನು ಚರ್ಚೆಗೆ ಬಿಡಲಾಗಿದೆ ಎಂದು ಹೇಳಲಾಗಿದೆ. ಲಿಂಗಾಯಿತ ಸಮುದಾಯ ಶೇ.10ರಷ್ಟು ಮತಗಳು ಕಾಂಗ್ರೆಸ್ ಪರವಾಗಿ ಬಂದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.36ರಷ್ಟು ಮತಗಳ ಮೂಲಕ ಬಂಡವಾಳವನ್ನು ಉಳಿಸಿಕೊಂಡರೆ ಮತ್ತೆ ಅಧಿಕರ ಹಿಡಿಯಲು ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರವಿದೆ. ಹೀಗಾಗಿ ಕಾಂಗ್ರೆಸ್‍ನ ಲಿಂಗಾಯಿತ ನಾಯಕರ ಪ್ರತ್ಯೇಕ ಧರ್ಮದ ಬೇಡಿಕೆಗೆ ಹೆಗಲು ಕೊಟ್ಟು ನಿಂತಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಪ್ರತ್ಯೇಕ ಧರ್ಮದ ಪರವಾಗಿದ್ದಾರೆ. ಆದರೆ, ಲಿಂಗಾಯಿತ-ವೀರಶೈವ ಎಂಬ ವಿಭಿನ್ನತೆಯನ್ನು ವಿರೋಧಿಸುತ್ತಿದ್ದಾರೆ. ಬಿಜೆಪಿ ಧರ್ಮದ ರಾಜಕಾರಣದಲ್ಲಿ ಇಕ್ಕಟ್ಟಿಗೆ ಸಿಲುಕಿದೆ. 2013ರಲ್ಲಿ ಲಿಂಗಾಯಿತ-ವೀರಶೈವ ಸಮುದಾಯದ ಬಹುತೇಕ ಜನಪ್ರತಿನಿಧಿಗಳು ಪ್ರತ್ಯೇಕ ಧರ್ಮದ ಬೇಡಿಕೆ ಮುಂದಿಟ್ಟು ಕೇಂದ್ರ ಸರ್ಕಾರಕ್ಕೆ ಬರದ ಪತ್ರಕ್ಕೆ ಸಹಿ ಹಾಕಿದ್ದರು. ಆಗಷ್ಟೇ ಸಿಎಂ ಆಗಿದ್ದ ಬಿಎಸ್‍ವೈ ಅವರು ಆ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆಗೆ ಬೆಂಬಲ ನೀಡಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅದೇ ದಾಳವನ್ನು ಉರುಳಿಸಿದ್ದಾರೆ.

ಇಕ್ಕಟ್ಟಿಗೆ ಸಿಲುಕಿರುವ ಬಿಎಸ್‍ವೈ ಬೆಂಬಲಿಸುವಂತೆಯೂ ಇಲ್ಲ ವಿರೋಧಿಸುವಂತೆಯೂ ಇಲ್ಲ ಎಂಬ ಇಕ್ಕಟ್ಟಿಗೆ ಸಿಲುಕಿದ್ದಾರೆ. ಬಿಜೆಪಿಯ ಮಾತೃ ಸಂಘಟನೆ ಆರ್‍ಎಸ್‍ಎಸ್ ಹಿಂದೂ ಧರ್ಮ ವಿಭಜನೆಯನ್ನು ಬಲವಾಗಿ ವಿರೋಧಿಸಲಿದೆ. ಹೀಗಾಗಿ ಬಿಎಸ್‍ವೈ ಪ್ರತ್ಯೇಕ ಧರ್ಮದ ಬೇಡಿಕೆಗೆ ಬಹಿರಂಗ ಬೆಂಬಲ ನೀಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಇದೆ. ಒಂದು ವೇಳೆ ವಿರೋಧ ಮಾಡಿದರೆ ಲಿಂಗಾಯಿತ ಧರ್ಮದ ಬೇಡಿಕೆ ಮಂಡಿಸುತ್ತಿರುವವರ ಅಸಮಾಧಾನಕ್ಕೆ ಗುರಿಯಾಗುವ ಸಾಧ್ಯತೆ ಇರುವುದರಿಂದ ಯಾವುದೇ ಮತನಾಡದೆ ಬಿಎಸ್‍ವೈ ಮೌನಕ್ಕೆ ಶರಣಾಗಿದ್ದಾರೆ. ಒಳ್ಳೆಯ ಸಮಯ ನೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತ್ಯೇಕ ಧರ್ಮದ ಚರ್ಚೆಗೆ ಇಂಬು ನೀಡುವ ಮೂಲಕ ಬಿಜೆಪಿ ಮರ್ಮಾಘಾತ ನೀಡಿದ್ದಾರೆ. ಕಾಂಗ್ರೆಸ್ ಲೆಕ್ಕಾಚಾರ ಭವಿಷ್ಯದಲ್ಲಿ ಪ್ರತ್ಯೇಕ ಧರ್ಮದ ಬೇಡಿಕೆ ವರವಾಗಲಿದೆಯೋ ಶಾಪವಾಗಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin