ಶಾಸಕ ಜಮೀರ್ ಪುತ್ರ ಜಹೀದ್‍ಖಾನ್ ಬಾಲಿವುಡ್’ಗೆ ಎಂಟ್ರಿ

Zameer-Ahamad--01
ಬೆಂಗಳೂರು, ಆ.1-ಶಾಸಕ ಜಮೀರ್ ಅಹಮ್ಮದ್‍ಖಾನ್ ಅವರ ಪುತ್ರ ಜಹೀದ್‍ಖಾನ್ ಬಾಲಿವುಡ್ ಗೆ ಪ್ರವೇಶ ಪಡೆಯುತ್ತಿರುವುದು ಸಂತಸ ವಿಷಯ ಎಂದು ಬ್ಯಾಡ್‍ಬಾಯ್ ಸಲ್ಮಾನ್‍ಖಾನ್ ಸಹೋದರ ಸಾಹೀಲ್‍ಖಾನ್ ಇಂದಿಲ್ಲಿ ಹೇಳಿದರು. ಜಮೀರ್‍ಅಹಮ್ಮದ್‍ರವರ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿಗೆ ಆಗಮಿಸಿ ಜಮೀರ್ ಅವರಿಗೆ ಶುಭ ಕೋರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮ್ಮದ್‍ಖಾನ್ ಅವರ ಪುತ್ರ ಜಹೀದ್‍ಖಾನ್ ಬಾಲಿವುಡ್ ಗೆ ಎಂಟ್ರಿ ಪಡೆಯುತ್ತಿರುವುದು ಸ್ವಾಗತಿಸುತ್ತೇವೆ. ಅವರು ಚಿತ್ರರಂಗದಲ್ಲಿ ಉನ್ನತವಾಗಿ ಬೆಳೆಯಲಿ ಎಂದು ಹೇಳಿದರು.

Zameer-Ahamad--03

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಜಮೀರ್, ಹುಟ್ಟುಹಬ್ಬ ಆಚರಣೆಗೆ ಸಲ್ಮಾನ್‍ಖಾನ್ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ ಅವರು ಶೂಟಿಂಗ್‍ನಲ್ಲಿ ಬ್ಯುಸಿಯಿದ್ದ ಕಾರಣ ಅವರ ಸಹೋದರ ಆಗಮಿಸಿದ್ದಾರೆ. ರಾಜಕೀಯ ಕಾರಣಗಳಿಂದ ಕೆಲವು ನಟರನ್ನು ಈ ಕಾರ್ಯಕ್ರಮಕ್ಕೆ ಕರೆಸಿಲ್ಲ ಎಂದು ತಿಳಿಸಿದರು. ಜಮೀರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಬೆಂಬಲಿಗರು, ವಿವಿಧ ಪಕ್ಷಗಳ ಕಾರ್ಯಕರ್ತರು, ಮುಖಂಡರು ಆಗಮಿಸಿ ಶುಭಕೋರಿದರು.

Zameer-Ahamad--02

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin