ಸರ್ಕಾರಕ್ಕೆ ತೂಗುಗತ್ತಿಯಾಗಿ ಪರಿಣಮಿಸಿದ ಸುಪ್ರೀಂಕೋರ್ಟ್ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Supreme-Court

ಬೆಂಗಳೂರು, ಆ.1- ಅಸ್ಸಾಂ ಸರ್ಕಾರದ ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಸಂಬಂಧ ಸುಪ್ರೀಂಕೋರ್ಟ್ ಹೊರಡಿಸಿರುವ ತೀರ್ಪು ರಾಜ್ಯ ಸರ್ಕಾರದ ಮೇಲೆ ತೂಗುಗತ್ತಿಯಾಗಿ ಪರಿಣಮಿಸಿದೆ.  ಸಿಎಂ ಸಿದ್ದರಾಮಯ್ಯ ಅವರಿಂದ ನೇಮಿಸಲ್ಪಟ್ಟಿರುವ ಸಂಸದೀಯ ಕಾರ್ಯದರ್ಶಿಗಳನ್ನು ಹುದ್ದೆಯಿಂದ ತೆಗೆದು ಹಾಕಬೇಕೆಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಗ್ರಹಿಸಿವೆ. ಸಂವಿಧಾನದ ತಿದ್ಧುಪಡಿ ಪ್ರಕಾರ, ಕರ್ನಾಟಕದ ಒಟ್ಟು ಶಾಸಕರ ಸಂಖ್ಯೆಯ ಪ್ರಮಾಣದ ಆಧಾರದಂತೆ ಸಚಿವರ ಸಂಖ್ಯೆ ಶೇ.15ಕ್ಕಿಂತ ಹೆಚ್ಚಿರುವ ಆಗಿಲ್ಲ, ರಾಜ್ಯ ಸರ್ಕಾರ 34ಕ್ಕಿಂತ ಹೆಚ್ಚು ಸಚಿವರನ್ನು ಹೊಂದುವಂತಿಲ್ಲ.

1963ರ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆ ಕಾಯಿದೆ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರು, ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ 10 ಎಂಎಲ್ ಎ ಮತ್ತು ಎಂ ಎಲ್ ಸಿಗಳನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ನೇಮಿಸಿದ್ದಾರೆ. ಅವರಿಗೆ ಸಂಪುಟ ದರ್ಜೆಯ ಸಚಿವರಿಗೆ ಸಿಗುವ ಎಲ್ಲಾ ಸ್ಥಾನಮಾನಗಳು ಅಂದರೆ, ಬಂಗಲೆ, ವಾಹನ ಟಿಎ,ಡಿಎ ಸೌಲಭ್ಯ ಸಿಗುತ್ತದೆ.  ಅಸ್ಸಾಂ ಸರ್ಕಾರಕ್ಕೆ ನೀಡಿರುವ ಸುಪ್ರಿಂಕೋರ್ಟ್ ತೀರ್ಪು ರಾಜ್ಯಕ್ಕೂ ಅನ್ವಯವಾಗುತ್ತದೆ ಎಂದು ಜೆಡಿಎಸ್ ಮತ್ತು ಬಿಜೆಪಿ ಹಾಗೂ ಕೆಲವು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ, ಇದನ್ನು ಪ್ರಶ್ನಿಸಿ ಯಾರಾದರೂ ಕೋರ್ಟ್ ಮೆಟ್ಟಿಲೇರಿ, ತಡೆಯಾಜ್ಞೆ ತಂದರೆ ಸುಪ್ರೀಂ ತೀರ್ಪಿನ ಅನ್ವಯ ಸಿಎಂ ಅವರಿಂದ ನೇಮಕಗೊಂಡಿರುವ ಎಲ್ಲಾ ಸಂಸದೀಯ ಕಾರ್ಯದರ್ಶಿಗಳು ತಮ್ಮ ಹುದ್ದೆ ಬಿಟ್ಟುಕೊಡಬೇಕಾಗುತ್ತದೆ ಎಂದು ಮಾಜಿ ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ ಹೇಳಿದ್ದಾರೆ.
ಅಸ್ಸಾಂ ಸರ್ಕಾರಕ್ಕೆ ನೀಡಿರುವ ತೀರ್ಪು ಇಡೀ ದೇಶಕ್ಕೆ ಅನ್ವಯವಾದರೇ ಉತ್ತಮ. ಕೋರ್ಟ್ ನಿಂದ ತಡೆಯಾಜ್ಞೆ ತಂದರೆ ಸಂಸದೀಯ ಕಾರ್ಯದರ್ಶಿಗಳ ಹುದ್ದೆಯ ಸ್ಥಾನಮಾನ ರದ್ದಾಗುತ್ತದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸಂಸದೀಯ ಕಾರ್ಯದರ್ಶಿಗಳಾಗಿ ನೇಮಕಗೊಂಡಿರುವ ಎಂಎಲ್ ಎ ಗಳು ಮತ್ತು ಎಂ ಎಲ್ ಸಿಗಳು ಶಾಸಕರಾಗಿ ವೇತನ ಪಡೆಯುವಂತಿಲ್ಲ, ಆದರೆ ಹಲವರು ಎರಡೆರಡು ವೇತನದ ಜೊತೆಗೆ ಭತ್ಯೆಯನ್ನು ಪಡೆಯುತ್ತಿದ್ದಾರೆ ಇದು ಕಾನೂನು ಬಾಹಿರ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಅಭಿಪ್ರಾಯ ಪಟ್ಟಿದ್ದಾರೆ.
ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಕೈ ಸೇರುವವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರಲು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ, ಯಾವ ಮಾನದಂಡದ ಆಧಾರದ ಮೇಲೆ ಅಸ್ಸಾಂ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ ಎಂಬುದು ನಮಗೆ ತಿಳಿದಿಲ್ಲ ಎಂದು ಅವರು ತಿಳಿಸಿದ್ದಾರೆ.

ಯಾರ್ಯಾರಿಗೆ ತೂಗುಕತ್ತಿ:

ಮಕ್ಬುಲ್ ಎಸ್.ಭಗವಾನ್ (ವಿಜಯಪುರ ಶಾಸಕರು), ರಾಜು ಹಲಗೂರು(ನಾಗಠಾಣ), ಉಮೇಶ್ ಜಿ.ಜಾದವ್(ಚಿಂಚೋಳಿ), ದೊಡ್ಡಮುನಿರಾಮಕೃಷ್ಣ ಸಿದ್ದಲಿಂಗಪ್ಪ (ಶಿರಹಟ್ಟಿ), ಚೆನ್ನಬಸಪ್ಪ ಶಿವಳ್ಳಿ (ಕುಂದಗೋಳ್), ಶಂಕುಂತಲಾಶೆಟ್ಟಿ (ಪುತ್ತೂರ್), ಸಿ.ಪುಟ್ಟರಂಗಶೆಟ್ಟಿ (ಚಾಮರಾಜನಗರ), ಎಚ್.ಪಿ.ಮಂಜುನಾಥ್ (ಹುಣಸೂರು), ಇ.ತುಕರಾಮ್(ಸಂಡೂರ್) ಹಾಗೂ ಕೆ.ಗೋವಿಂದರಾಜು (ವಿಧಾನಪರಿಷತ್ ಸದಸ್ಯ).

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin