2018ರ ವರೆಗೂ ಪಡಿತರ ಗೋಧಿ-ಅಕ್ಕಿ ಸಬ್ಸಿಡಿ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Ration-Card-01

ನವದೆಹಲಿ, ಆ.1- ಗೋಧಿ ಮತ್ತು ಅಕ್ಕಿ ಪ್ರತಿ ಕೆಜಿಗೆ ತಲಾ 2 ಮತ್ತು 3ರೂ.ಗಳ ಸಬ್ಸಿಡಿಯನ್ನು 2018ರ ವರೆಗೂ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಇಂದು ಲೋಕಸಭೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅವರು ಈ ವಿಷಯ ತಿಳಿಸಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಹಾರ ಭದ್ರತಾ ಕಾಯ್ದೆಯಡಿ ಈ ದರವನ್ನು ಪರಿಷ್ಕøತಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ರಾಜ್ಯಾದ್ಯಂತ ರೈತರಿಗೆ ನೀಡುವ ರಿಯಾಯಿತಿ ಬೆಲೆಯ ರಸಗೊಬ್ಬರವನ್ನು ನೇರವಾಗಿ ರೈತರಿಗೇ ತಲುಪಿಸುವ ನಿಟ್ಟಿನಲ್ಲಿ 2 ಲಕ್ಷ ಗೊಬ್ಬರ ಮಾರಾಟ ಕೇಂದ್ರಗಳನ್ನು ತೆರೆಯಲಾಗುವುದು ಎಂದು ರಸಗೊಬ್ಬರ ಖಾತೆ ಸಹಾಯಕ ಸಚಿವ ಮನ್ಸಖ್ ಎಲ್.ಮಾಂಡವೀಯ ಲೋಕಸಭೆಗೆ ತಿಳಿಸಿದ್ದಾರೆ.
ಸರ್ಕಾರ ನೀಡುವ ರಿಯಾಯಿತಿ ದರದ ರಸಗೊಬ್ಬರಗಳ ಸಬ್ಸಿಡಿ ಹಣ ನೇರವಾಗಿ ರೈತರಿಗೇ ತಲುಪಬೇಕು. ಈ ಉದ್ದೇಶದಿಂದ ಈ ರೀತಿ ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ನೇರ ಮಾರಾಟ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin