ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ : ಬಾಂಬ್ ದಾಳಿಯಲ್ಲಿ 30ಕ್ಕೂ ಹೆಚ್ಚು ಸಾವು

Afganistan--01

ಹೆರಾತ್, ಆ.2-ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಹೆರಾತ್‍ನಲ್ಲಿರುವ ಮಸೀದಿ ಮೇಲೆ ಉಗ್ರನೊಬ್ಬ ನಡೆಸಿದ ಭೀಕರ ಆತ್ಮಾಹುತಿ ದಾಳಿಗೆ 30ಕ್ಕೂ ಹೆಚ್ಚು ಮಂದಿ ಬಲಿಯಾಗಿ, ಅನೇಕರು ತೀವ್ರ ಗಾಯಗೊಂಡಿದ್ಧಾರೆ. ಶಿಯಾ ಸಮುದಾಯದವರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆದಿದೆ. ಗಾಯಗೊಂಡ 60ಕ್ಕೂ ಅಧಿಕ ಮಂದಿಯಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಆತ್ಮಾಹುತಿ ಬಾಂಬ್ ದಾಳಿ ನಂತರ ತೀವ್ರ ಹಾನಿಗೊಳಗಾದ ಮಸೀದಿಯನ್ನು ಭದ್ರತಾಪಡೆಗಳು ಸುತ್ತುವರಿದಿವೆ. ಎರಡು ದಿನಗಳ ಹಿಂದಷ್ಟೇ, ರಾಜಧಾನಿ ಕಾಬೂಲ್‍ನಲ್ಲಿರುವ ಇರಾಕ್ ರಾಯಭಾರಿ ಕಚೇರಿ ಮೇಲೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ದಾಳಿ ನಡೆಸಿದ್ದರು.  ಕಳೆದ ತಿಂಗಳೊಂದರಲ್ಲೇ ಅಫ್ಘಾನಿಸ್ತಾನದ ವಿವಿಧೆಡೆ ತಾಲಿಬಾನ್ ಮತ್ತು ಐಎಸ್ ಉಗ್ರರು ನಡೆಸಿದ ದಾಳಿಗಳಲ್ಲಿ 85ಕ್ಕೂ ಹೆಚ್ಚು ಮಂದಿ ಹತರಾಗಿ, ಸುಮಾರು 400 ಮಂದಿ ಗಾಯಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin