ಅಸಮರ್ಪಕ ಸ್ತನ್ಯಪಾನದಿಂದ ಭಾರತದ 14 ಶತಕೋಟಿ ಡಾಲರ್ ಆರ್ಥಿಕತೆ ವ್ಯರ್ಥ

ಈ ಸುದ್ದಿಯನ್ನು ಶೇರ್ ಮಾಡಿ

Breasr-Feedin-g01

ವಿಶ್ವಸಂಸ್ಥೆ,ಆ.2-ಸ್ತನ್ಯಪಾನದ ಮೂಲಕ ತಡೆಗಟ್ಟಬಹುದಾದ ರೋಗಗಳಿಂದ ಭಾರತದಲ್ಲಿ ಪ್ರತಿ ವರ್ಷ ಸುಮಾರು ಒಂದು ಲಕ್ಷ ಮಕ್ಕಳು ಸಾವಿಗೀಡಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ ಅಸಮರ್ಪಕ ಸ್ತನ್ಯಪಾನದಿಂದಾಗಿ ಪ್ರತಿ ವರ್ಷ ಭಾರತದ 14 ಶತಕೋಟಿ ಡಾಲರ್ ಆರ್ಥಿಕತೆ ವ್ಯರ್ಥವಾಗುತ್ತಿದೆ ಎಂಬ ಅಚ್ಚರಿ ಅಂಕಿಅಂಶವನ್ನು ಸಹ ನೀಡಿದೆ.

ಚೀನಾ, ಭಾರತ, ನೈಜೀರಿಯಾ, ಮೆಕ್ಸಿಕೋ ಮತ್ತು ಇಂಡೋನೇಷ್ಯವೊಂದರಲ್ಲೇ ಅಸಮರ್ಪಕ ಸ್ತನ್ಯಪಾನದಿಂದ(ಕ್ರಮವಲ್ಲದ ಹಾಲುವುಣಿಸುವಿಕೆ) ಪ್ರತಿವರ್ಷ 2.36 ಲಕ್ಷಕ್ಕೂ ಹೆಚ್ಚು ಮಕ್ಕಳ ಸಾವಿಗೆ ಕಾರಣವಾಗುತ್ತಿದೆ ಎಂದು ಹೇಳಿದೆ.  ಈ ದೇಶಗಳಲ್ಲಿ ಈ ಸಮಸ್ಯೆಯಿಂದಾಗಿ ಪ್ರತಿ ವರ್ಷ ಒಟ್ಟು 119 ಶತಕೋಟಿ ಡಾಲರ್ ಆರ್ಥಿಕತೆ ವ್ಯರ್ಥವಾಗುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin