ಈ ಬಾಲಾಜಿ ಕ್ಯಾಂಟೀನ್‍ನಲ್ಲಿ 5ರೂ.ಗೆ ಸಿಗುತ್ತೆ ಊಟ

Balaji-Canteen--01

ಗುಬ್ಬಿ, ಆ.2-ಪಟ್ಟಣದಲ್ಲಿ ಶ್ರೀಬಾಲಾಜಿ ಸೇವಾ ಟ್ರಸ್ಟ್ ವತಿಯಿಂದ ಆರಂಭಿಸಿರುವ ಬಾಲಾಜಿ ಕ್ಯಾಂಟೀನ್ ಪ್ರಾರಂಭಗೊಂಡು 50 ದಿನಗಳು ಪೂರ್ಣಗೊಂಡಿದ್ದು ಇದುವರೆಗೆ 80 ಸಾವಿರಕ್ಕೂ ಹೆಚ್ಚು ಜನ ಊಟ ಮಾಡಿರುವುದು ಸಚಿತಸ ತಂದಿದೆ ಎಂದು ಶ್ರೀ ಬಾಲಾಜಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಿಧ ಇಲಾಖೆಗಳಿಗೆ ಮತ್ತು ಇತರೆ ಕೆಲಸ ಕಾರ್ಯಗಳಿಗೆ ದೂರದ ಗ್ರಾಮೀಣ ಭಾಗದಿಂದ ಬರುವ ಜನಸಾಮಾನ್ಯರು ಮಧ್ಯಾಹ್ನದ ವೇಳೆ ಹಸಿವಿನಿಂದ ಹೋಗಬಾರದು ಎಂಬ ಕಾರಣಕ್ಕೆ ಟ್ರಸ್ಟ್ ವತಿಯಿಂದ 5 ರೂಗೆ ಊಟ ನೀಡುವ ಸದುದ್ದೇಶದಿಂದ ಕ್ಯಾಂಟೀನ್ ಪ್ರಾರಂಭಿಸಿದ್ದೇವೆ ಎಂದರು.

ಮುಂದಿನ ದಿನದಲ್ಲಿ ಹೋಬಳಿ ಗೊಂದರಂತೆ ಕ್ಯಾಂಟಿನ್ ತೆರೆಯಲು ಯೋಜನೆ ರೊಪಿಸಲಾಗುತ್ತಿದೆ ತಾಲೂಕಿನ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಖಂಡಿತವಾಗಿ ಮಾಡಲು ಉತ್ಸಾಹಕನಾಗಿದ್ದೇನೆ. ಮುಂದೆ ಬಾಲಾಜಿ ಬ್ಯಾಂಕ್ ಮಾಡಲಿದ್ದು ಅದರ ಮುಖೇನ ತಾಲೂಕಿನ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ಸಹ ಬದ್ಧ ಎಂದು ತಿಳಿಸಿದರು.  ಟ್ರಸ್ಟಿ ದೇವರಾಜು, ಜಿ.ಸಿ.ಶಿವಕುಮಾರ್, ವೆಂಕಟೇಶ್, ರಾಕೇಶ್,ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin