ಕಾಶ್ಮೀರ ಕಣಿವೆಯಲ್ಲಿ ಈ ವರ್ಷ 116 ಭಯೋತ್ಪಾದಕರು ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Terrorist--01

ನವದೆಹಲಿ, ಆ.2-ಕಾಶ್ಮೀರ ಕಣಿವೆಯಲ್ಲಿ ಈ ವರ್ಷದಲ್ಲಿ ಇದುವರೆಗೆ 116 ಭಯೋತ್ಪಾದಕರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ. ಲಷ್ಕರ್-ಎ-ತೈಬಾದ(ಎಲ್‍ಇಟಿ) ಅಬು ದೂಜಾಜಾ ಯೋಧರು ಹೊಡೆದುರುಳಿಸಿದ 116ನೇ ಉಗ್ರಗಾಮಿಯಾಗಿದ್ದಾನೆ. ಎಲ್‍ಇಟಿಯ ಮತ್ತೊಬ್ಬ ಕುಖ್ಯಾತ ಭಯೋತ್ಪಾದಕ ಅರಿಫ್ ಲಿಲ್‍ಹಾರಿ ಹತನಾದ 115ನೇ ಭಯೋತ್ಪಾದಕ.

ಈ ವರ್ಷದ ಜುಲೈ 31ರವರೆಗೆ ಕಣಿವೆ ರಾಜ್ಯದಲ್ಲಿ 114 ಉಗ್ರರು ಹತರಾಗಿದ್ದರು. 2016ರ ಇದೇ ಅವಧಿಯಲ್ಲಿ ಕಾಶ್ಮೀರದಲ್ಲಿ 96 ಭಯೋತ್ಪಾದಕರನ್ನು ಯೋಧರು ಕೊಂದಿದ್ದರು. ಆಸಕ್ತಿಕರ ಸಂಗತಿ ಎಂದರೆ ಈ ವರ್ಷದ ಜುಲೈ ತಿಂಗಳೊಂದರಲ್ಲೇ 22 ಆತಂಕವಾದಿಗಳನ್ನು ಕೊಲ್ಲಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin