ಕ್ರಿಸ್ಟೋಫರ್ ಎಫ್‍ಬಿಐ ನೂತನ ನಿರ್ದೇಶಕ

ಈ ಸುದ್ದಿಯನ್ನು ಶೇರ್ ಮಾಡಿ

FBI--01

ವಾಷಿಂಗ್ಟನ್, ಆ.2 – ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್‍ವೆಸ್ಟಿಗೇಷನ್(ಎಫ್‍ಬಿಐ) ನೂತನ ನಿರ್ದೇಶಕರಾಗಿ ಕ್ರಿಸ್ಟೋಫರ್ ವ್ರೇ ಚುನಾಯಿತರಾಗಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರಭಾವ ಬೀರಲು ರಷ್ಯಾ ಸರ್ಕಾರದೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಮೀಲಾದ ಆರೋಪಗಳ ತನಿಖೆ ವೇಳೆ ವಜಾಗೊಂಡಿದ್ದ ಹಿಂದಿನ ಎಫ್‍ಬಿಐ ನಿರ್ದೇಶಕ ಜೇಮ್ಸ್ ಕೋಮಿ ಹುದ್ದೆಗೆ ಈಗ ಕ್ರಿಸ್ಟೋಫರ್ ಅವರನ್ನು ನೇಮಕ ಮಾಡಲಾಗಿದೆ.

ಸೆನೆಟ್‍ನಲ್ಲಿ ಕ್ರಿಸ್ಟೋಫರ್ ಪರವಾಗಿ 92 ಮತ್ತು ವಿರುದ್ಧವಾಗಿ 5 ಮತಗಳು ಚಲಾವಣೆಯಾದವು. ಈ ದ್ವಿಪಕ್ಷೀಯ ಬೆಂಬಲದೊಂದಿಗೆ ಅವರು ದೇಶದ ಅತ್ಯುನ್ನತ ಕಾನೂನು ಜಾರಿ ಸಂಸ್ಥೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin