ದೆಹಲಿ ಏರ್‍ಪೋರ್ಟ್‍ನಲ್ಲಿ ಬಾಂಬ್..!

Delhi-Airport--01

ನವದೆಹಲಿ, ಆ.2-ದೆಹಲಿ ವಿಮಾನನಿಲ್ದಾಣದ ಸರಕುಗಳ ಸಂಗ್ರಹ ಪ್ರದೇಶದಲ್ಲಿ ಸಂಶಯಾಸ್ಪದ ವಸ್ತುವೊಂದು ಪತ್ತೆಯಾದ ನಂತರ ಬಾಂಬ್ ನಿಷ್ಕ್ರಿಯ ಮತ್ತು ಶ್ವಾನದಳಗಳು ತೀವ್ರ ಶೋಧ ನಡೆಸಿದವು. ಅಲ್ಲಿ ಯಾವುದೇ ಸ್ಫೋಟಕ ಕಂಡುಬರಲಿಲ್ಲ. ಪತ್ತೆಯಾದ ವಸ್ತುವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ. ಅದು ಸ್ಫೋಟಕವಲ್ಲ. ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‍ಎಫ್) ಮಹಾ ನಿರ್ದೇಶಕ ಓ.ಪಿ.ಸಿಂಗ್ ತಿಳಿಸಿದ್ದಾರೆ.

ಇಂದು ಬೆಳಗ್ಗೆ 7.05ರಲ್ಲಿ ಕಾರ್ಗೋ ಪ್ರದೇಶದಲ್ಲಿ ಶಂಕಾಸ್ಪದ ವಸ್ತು ಪತ್ತೆಯಾದ ಬಗ್ಗೆ ಕಂಟ್ರೋಲ್ ರೂಂಗೆ ತುರ್ತು ಕರೆ ಬಂದಿತ್ತು. ನಂತರ ಬಾಂಬ್ ಮತ್ತು ಡಾಗ್ ಸ್ಕ್ವಾಡ್‍ಗಳನ್ನು ತಕ್ಷಣ ಅಲ್ಲಿಗೆ ರವಾನಿಸಿ ತೀವ್ರ ಶೋಧ ನಡೆಸಲಾಗಿತ್ತು. ಪತ್ತೆಯಾದ ವಸ್ತುವು ಮಾರುತಿ ಕಂಪೆನಿಗೆ ಸೇರಿದ ವಾಹನದ ಬಿಡಿಭಾಗ ಎಂಬುದು ದೃಢಪಟ್ಟಿತು. ಕೂಲಂಕಷ ತಪಾಸಣೆ ನಂತರ ಈ ಪ್ರದೇಶ ಸುರಕ್ಷಿತವಾಗಿದೆ ಎಂದು ಘೋಷಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin