‘ನೊಟಾ’ ಬಳಕೆಗೆ ಕಾಂಗ್ರೆಸ್ ವಿರೋಧ, ನಾಳೆ ಸುಪ್ರೀಂನಲ್ಲಿ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

NOTA--01

ನವದೆಹಲಿ, ಆ.2-ರಾಜ್ಯಸಭೆ ಚುನಾವಣೆಗಳಲ್ಲಿ ನೊಟಾ (ನನ್ ಅಫ್ ದಿ ಅಬೋ ಅಥವಾ ಮೇಲಿನವರು ಯಾರೂ ಅಲ್ಲ) ಆಯ್ಕೆಯನ್ನು ಬಳಸಬಹುದು ಎಂಬ ಸರ್ಕಾರ ನಿರ್ಧಾರ ಪ್ರಶ್ನಿಸಿ ಗುಜರಾತ್ ಕಾಂಗ್ರೆಸ್ ಸದಸ್ಯರು ಸಲ್ಲಿಸಿರುವ ಮನವಿ ಕುರಿತು ನಾಳೆ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿ ಸೂಚಿಸಿದೆ.
ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಾಲ್ ಈ ಸಂಬಂಧ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸಿ ಮನವಿಯ ತ್ವರಿತ ವಿಚಾರಣೆಗೆ ಒಳಪಡಿಸಬೇಕೆಂದು ಕೋರಿದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಒಪ್ಪಿಗೆ ನೀಡಿತು.

ರಾಜ್ಯಸಭೆ ಚುನಾವಣೆಗಳಲ್ಲಿ ನೊಟಾ (ಯಾವೊಬ್ಬ ಅಭ್ಯರ್ಥಿಗೂ ಮತ ಹಾಕದ ನಿರ್ಧಾರ) ಆಯ್ಕೆಗೆ ಸಂವಿಧಾನದಲ್ಲಿ ಯಾವುದೇ ಶಾಸನಬದ್ಧ ನಿಯಮಗಳಿಲ್ಲ. ಈ ಸಂಬಂಧ ಸರ್ಕಾರ ಹೊರಡಿಸಿರುವ ನಿರ್ದೇಶನಗಳು ಸರಿಯಾದುದಲ್ಲ. ಹೀಗಾಗಿ ಈ ಬಗ್ಗೆ ತುರ್ತು ವಿಚಾರಣೆ ನಡೆಸಬೇಕು ಎಂದು ಕಪಿಲ್ ಮನವಿ ಮಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin