ಪತನಗೊಂಡ ವಿಮಾನದ ಬ್ಲಾಕ್‍ಬಾಕ್ಸ್ ಪತ್ತೆಗೆ ಬಂತು ಹೊಸ ತಂತ್ರಜ್ಞಾನ

ಈ ಸುದ್ದಿಯನ್ನು ಶೇರ್ ಮಾಡಿ

Black-Box--01

ನವದೆಹಲಿ, ಆ.2-ಭಾರತದ ಸೇರಿದಂತೆ ವಿಶ್ವದ ಹಲವೆಡೆ ವಿಮಾನಗಳು ಹಾರಾಡುತ್ತಿರುವಾಗಲೇ ಆಗಸದಲ್ಲಿ ಪತನಗೊಂಡು ನಿಗೂಢವಾಗಿ ಕಣ್ಮರೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇಂಥ ದುರಂತಗಳಿಗೆ ಕಾರಣವೇನು ಎಂಬುದು ನಿಗೂಢವಾಗಿದೆ. ವಿಮಾನದ ಕಪ್ಪು ಪೆಟ್ಟಿಗೆ (ಬ್ಲಾಕ್‍ಬಾಕ್ಸ್) ಪತ್ತೆಯಾಗದೇ ಇರುವುದೇ ಇದಕ್ಕೆ ಕಾರಣ. ಈಗ ಬ್ಲಾಕ್‍ಬಾಕ್ಸ್ ಪತ್ತೆಗೆ ಭಾರತ ವಿನೂತನ ತಂತ್ರಜ್ಞಾನವೊಂದನ್ನು ಅಭಿವೃದ್ದಿಗೊಳಿಸಿದೆ.

ವಿಮಾನಗಳು ಭೂಮಿಗೆ ಸನಿಹದಲ್ಲಿ ಅಥವಾ ಭೂಮಿ ಮೇಲೆ ಅಪಘಾತಕ್ಕೀಡಾಗಿದ್ದಲ್ಲಿ ಬ್ಲಾಕ್‍ಬಾಕ್ಸ್‍ಗಳು ಬಹುತೇಕ ಪತ್ತೆಯಾಗುತ್ತವೆ. ಆದರೆ ಸಮುದ್ರದಲ್ಲಿ ಪತನಗೊಂಡಾಗ ಕಪ್ಪುಪೆಟ್ಟಿಗೆ ಪತ್ತೆಯಾಗಿದ್ದು ತೀರಾ ಕಡಿಮೆ. ಹೀಗಾಗಿ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‍ಡಿಒ) ಬಿಸ್ಯಾಟ್ ಎಂಬ ಸ್ವಯಂಚಾಲಿತ ಬ್ಲಾಕ್‍ಬಾಕ್ಸ್ ಗಳನ್ನು ಅಭಿವೃದ್ದಿಗೊಳಿಸಿದೆ.

ಅತ್ಯಂತ ಸೂಕ್ಷ್ಮಗ್ರಾಹಿಯಾದ ಈ ಕಪ್ಪುಪೆಟ್ಟಿಗೆಯನ್ನು ವಿಮಾನದ ಹಿಂಭಾಗದಲ್ಲಿ ಅಳವಡಿಸಲಾಗುತ್ತದೆ. ಕಾಕ್‍ಪಿಟ್‍ನಲ್ಲಿ ಪೈಲೆಟ್‍ಗಳ ನಡುವೆ ನಡೆಯುವ ಸಂಭಾಷಣೆಗಳು ಇದರಲ್ಲಿ ಧ್ವನಿಮುದ್ರಿತವಾಗಿರುತ್ತವೆ. ಅಲ್ಲದೇ ಪತನಕ್ಕೂ ಮುನ್ನ ವಿಮಾನ ಹಾರುತ್ತಿದ್ದ ವೇಗ, ಎತ್ತರ ಹಾಗೂ ರೇಡಾರ್ ಮೊದಲಾದ ಮಾಹಿತಿಗಳು ಇದರಲ್ಲಿ ದಾಖಲಾಗಿರುತ್ತವೆ. ವಿಮಾನ ಆಗಸದಲ್ಲೇ ಸ್ಫೋಟಗೊಂಡರೂ ಮತ್ತು ಸಾಗರದಲ್ಲಿ ಮುಳುಗಿದರೂ ಬ್ಲಾಕ್‍ಬಾಕ್ಸ್‍ಗೆ ಯಾವುದೇ ಹಾನಿಯಾಗುವುದಿಲ್ಲ.

ವಿಮಾನ ಪತನಗೊಂಡು ಸಮುದ್ರಕ್ಕೆ ಬಿದ್ದಾಗ ಸಾಗರಗರ್ಭ ಸೇರಿದಾಗ ಬ್ಲಾಕ್‍ಬಾಕ್ಸ್ ಸುರಕ್ಷಿತವಾಗಿ ನೀರಿನ ಮೇಲೆ ತೇಲುತ್ತದೆ. ಅಲ್ಲದೇ ಇದರಿಂದ ಸಿಗ್ನಲ್‍ಗಳು ಹೊರಹೊಮ್ಮುತ್ತವೆ. ಹೀಗಾಗಿ ಇದನ್ನು ಸುಲಭವಾಗಿ ಪತ್ತೆ ಮಾಡಬಹುದು. ನಂತರ ಇದರಲ್ಲಿ ದಾಖಲಾಗಿರುವ ಮಾಹಿತಿಗಳನ್ನು ಆಧರಿಸಿ ವಿಮಾನ ಅಪಘಾತಕ್ಕೆ ಕಾರಣವನ್ನು ನಿಖರವಾಗಿ ತಿಳಿಯಬಹುದಾಗಿದೆ. ಬಿಸ್ಯಾಟ್ 1.31 ಕೆಜಿ ತೂಕ ಮತ್ತು 151 ಸೆಂ.ಮೀ.ಸುತ್ತಳತೆ ಹೊಂದಿರುತ್ತದೆ. ಜಲಾಂರ್ತಗಾಮಿ ಮತ್ತು ಸಾಗರಗರ್ಭದ ಜಲ ವಾಹನಗಳಲ್ಲೂ ಇದನ್ನು ಬಳಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin