ಬಿಗ್‍ಬಾಸ್‍ನಲ್ಲಿ ತದ್ರೂಪಿ ‘ಪ್ರಿಯಾಂಕಾ ಚೋಪ್ರಾ’..!

Priyanaka-Chopre--01

ನವದೆಹಲಿ, ಆ.2-ಈ ಪ್ರಪಂಚದಲ್ಲಿ ಒಬ್ಬರಂತೆ ಏಳು ಜನ ಇರುತ್ತಾರಂತೆ. ಚಿತ್ರತಾರೆಯರು, ಕ್ರೀಡಾಪಟುಗಳು ಮತ್ತು ಖ್ಯಾತನಾಮರನ್ನು ತದ್ರೂಪು ಹೋಲುವ (ಲುಕ್ ಅಲೈಕ್) ಮಂದಿ ಇದೇ ಕಾರಣಕ್ಕಾಗಿ ವಿಶೇಷ ಗಮನಸೆಳೆಯುತ್ತಾರೆ.  ಮಾಜಿ ಭುವನ ಸುಂದರಿ ಮತ್ತು ಖ್ಯಾತನಟಿ ಐಶ್ವರ್ಯ ರೈ ಪ್ರತಿರೂಪದಂತಿರುವ ಸ್ನೇಹ ಉಲ್ಲಾಳ ಅಚ್ಚರಿ ಮೂಡಿಸಿದ್ದರು. ಕೆಲವೊಂದು ಸಿನಿಮಾಗಳಲ್ಲೂ ನಟಿಸಿ ಐಶು ಅವರಿಂದಲೂ ಪ್ರಶಂಸೆಗೆ ಪಾತ್ರವಾಗಿದ್ದರು. ಈಗ ಮಾಜಿ ವಿಶ್ವಸುಂದರಿ ಮತ್ತು ಬಾಲಿವುಡ್-ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾರನ್ನೇ ಹೋಲುವ 21 ವರ್ಷದ ಯುವತಿಯೊಬ್ಬಳು ಭಾರೀ ಸುದ್ದಿ ಮಾಡುತ್ತಿದ್ದಾಳೆ. ಈಕೆಯ ಹೆಸರು ನವ್‍ಪ್ರೀತ್ ಬಂಗಾ. ಭಾರತೀಯ ಮೂಲದ ಈಕೆ ಕೆನಡಾದ ವೇಟ್‍ಲಿಫ್ಟರ್ ಮತ್ತು ಪಿಟ್ನೆಸ್ ಬ್ಲಾಗರ್.

ಭಾರತದ ಪ್ರಸಿದ್ಧ ಮತ್ತು ಅಷ್ಟೇ ವಿವಾದಿತ ಟೆಲಿವಿಷನ್ ರಿಯಾಲಿಟಿ ಗೇಮ್‍ಶೋ ಬಿಗ್‍ಬಾಸ್‍ನ ಮುಂದಿನ ಸರಣಿಯಲ್ಲಿ ಈಕೆ ಭಾಗವಹಿಸಿ ಗಮನ ಸೆಳೆಯುತ್ತಿದ್ದಾಳೆ. ಸೇಮ್ ಟು ಸೇಮ್ ಪಿಂಕಿಯನ್ನೇ ಹೋಲುವ ಈ ಬೆಡಗಿ ಬಿಗ್‍ಬಾಸ್‍ನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗುವುದರಲ್ಲಿ ಅನುಮಾನವೇ ಇಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin