ಮಾಜಿ ಕೇಂದ್ರ ಸಚಿವ ಸಂತೋಷ್ ಮೋಹನ್ ದೇವ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Santosh Mohan Dev

ನವದೆಹಲಿ, ಆ.2-ಕಾಂಗ್ರೆಸ್ ಧುರೀಣ ಹಾಗೂ ಕೇಂದ್ರದ ಮಾಜಿ ಸಚಿವ ಸಂತೋಷ್ ಮೋಹನ್ ದೇವ್ ಇಂದು ಬೆಳಗ್ಗೆ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಮತ್ತು ಇತರ ಅನಾರೋಗ್ಯಗಳಿಂದ ಬಳಲುತ್ತಿದ್ದ ಅವರು ಅಸ್ಸಾಂನ ಸಿಲ್ಚಾರ್‍ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
ಡಾ.ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ಧಾಗ ಯಪಿಎ-1 ಸರ್ಕಾರದಲ್ಲಿ ಅವರು ಬೃಹತ್ ಕೈಗಾರಿಕಾ ಸಚಿವರಾಗಿದ್ದರು. ಇಂದು ಬೆಳಗ್ಗೆ 6.06ರಲ್ಲಿ ಅವರು ವಿಧಿವಶರಾದರು ಎಂದು ದೇವ್ ಅವರ ಪುತ್ರಿ ಮತ್ತು ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ತಿಳಿಸಿದ್ದಾರೆ. ಏಳು ಬಾರಿ ಕಾಂಗ್ರೆಸ್ ಸಂಸದರಾಗಿದ್ದ ಅವರು ಪತ್ನಿ ಮತ್ತು ಸುಷ್ಮಿತಾ ಸೇರಿದಂತೆ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin