ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗೆ ಹಣ ಖರ್ಚು ಮಾಡುವ ವಿಧಾನ ಬದಲಿಸಲು ಚಿಂತನೆ
ಬೆಂಗಳೂರು, ಆ.2- ನಂಜುಂಡಪ್ಪ ವರದಿಯಂತೆ ಹಿಂದುಳಿದ 114 ತಾಲ್ಲೂಕುಗಳ ಸಮಗ್ರ ಅಭಿವೃದ್ಧಿಗೆ ಹಣ ಖರ್ಚು ಮಾಡುವ ವಿಧಾನವನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯೋಜನೆ, ಸಾಂಖ್ಯಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಮ್ ಅವರು, ನಂಜುಂಡಪ್ಪ ವರದಿ ಸಲ್ಲಿಕೆಯಾಗಿ ಏಳು ವರ್ಷಗಳು ಕಳೆದಿವೆ. ಈವರೆಗೂ ಪ್ರತಿ ವರ್ಷ 3ಸಾವಿರದಂತೆ ಒಟ್ಟು 21 ಸಾವಿರ ಕೋಟಿ ಖರ್ಚು ಮಾಡಲಾ ಗಿದೆ. 2017-18ನೇ ಸಾಲಿನಲ್ಲಿ ಮತ್ತೆ 3ಸಾವಿರ ಕೋಟಿ ರೂ. ಖರ್ಚು ಮಾಡ ಲಾಗುತ್ತಿದ್ದು, ಒಟ್ಟು 24ಸಾವಿರ ಕೋಟಿ ರೂ. ಖರ್ಚು ಮಾಡಿದಂತಾಗಿದೆ ಎಂದು ಮಾಹಿತಿ ನೀಡಿದರು.
ಇಷ್ಟು ಬೃಹತ್ ಮೊತ್ತದ ಹಣ ಖರ್ಚು ಮಾಡಿದರೂ ನಂಜುಂಡಪ್ಪ ಸಮಿತಿ ಗುರುತಿಸಿದ್ದ 114 ತಾಲ್ಲೂಕುಗಳಲ್ಲಿ ನಿರೀಕ್ಷಿತ ಅಭಿವೃದ್ಧಿಯಾಗಿಲ್ಲ. ಬಜೆಟ್ನ ಹಣ ಖರ್ಚು ಮಾಡುವಂತೆ ಸಾಮಾನ್ಯ ಕ್ರಿಯಾ ಯೋಜನೆಗೆ ಈ ಹಣ ಖರ್ಚು ಮಾಡುತ್ತಿರುವುದುರಿಂದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹಾಗಾಗಿ ಆಧ್ಯತಾ ವಲಯಗಳನ್ನು ಗುರುತಿಸಲು ನಿರ್ಧರಿಸಲಾಗಿದೆ. ಮುಂದಿನ ವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆಧ್ಯತಾ ಇಲಾಖೆಗಳನ್ನು ಗುರುತಿಸಲಾಗು ವುದು. ಲೋಕೋಪಯೋಗಿ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಸೇರಿದಂತೆ ಪ್ರಮುಖ ಇಲಾಖೆಗಳನ್ನು ಪಟ್ಟಿ ಮಾಡಿ ಆ ಇಲಾಖೆಗಳಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.
ಈ ಬಗ್ಗೆ ಈಗಾಗಲೇ ಶಾಸಕರೊಂದಿಗೆ ಚರ್ಚೆ ನಡೆಸಲಾಗಿದೆ. ಅವರೂ ಸಹಮತಿಸಿದ್ದಾರೆ. ಮುಖ್ಯಮಂತ್ರಿ ಅವರ ಜತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬಹುದೇ ಅಥವಾ ಶಾಸನ ಸಭೆಯಲ್ಲಿ
ಕಾಯ್ದೆಗೆ ತಿದ್ದುಪಡಿ ಮಾಡುವ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಅಂತಿಮ ನಿರ್ಧಾರ ತೆಗೆದುಕೊಂಡ ನಂತರ ಶಾಸಕರಿಂದಲೇ ಕ್ರಿಯಾ ಯೋಜನೆ ಪಡೆದು ನಂಜುಂಡಪ್ಪ ವರದಿ ಅನುಷ್ಠಾನಕ್ಕೆ ವಿಶೇಷ ಅನುದಾನ ಖರ್ಚು ಮಾಡುವುದಾಗಿ ಸಚಿವರು ಹೇಳಿದರು. ಶಾಸಕರ ಸ್ಥಳೀಯಾಭಿವೃದ್ಧಿಗೆ ಈಗಾಗಲೇ 50 ಲಕ್ಷ ಬಿಡುಗಡೆಯಾಗಿದೆ.
ಕಳೆದ ವರ್ಷ ಖರ್ಚಾಗದೇ ಉಳಿದ ಹಣವೂ ಇದೆ. ಮುಂದಿನ ಸೆಪ್ಟೆಂಬರ್ ಅಥವಾ ಅಕ್ಟೋಬರ್ ವೇಳೆಗೆ ಇನ್ನೂ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಮಾರ್ಚ್ ವೇಳೆಗೆ ಒಟ್ಟು 2 ಕೋಟಿ ರೂ.ವನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿಗೆ ಒದಗಿಸುವುದಾಗಿ ಹೇಳಿದರು. ಕೊಡುಗು ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ನೀರಿನ ಸಂಗ್ರಹವೂ ಕಡಿಮೆ ಇದೆ. ಹೀಗಾಗಿ ಕುಡಿಯುವ ನೀರಿಗೆ ಹೊರತುಪಡಿಸಿ ಕೃಷಿಗೆ ನೀರು ಬಿಡದೇ ಇರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಮುಂಗಾರು ಮಳೆ ಹಿನ್ನಡೆಯಾ ಗುತ್ತಿದೆ. ಹಾರಂಗಿ ಸೇರಿದಂತೆ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ನೀರು ಬಂದರೆ ಅನುಕೂಲವಾಗಲಿದೆ. ಇಲ್ಲವಾದರೆ ಸಂಕಷ್ಟದ ದಿನಗಳನ್ನು ಎದುರಿ¸ ಬೇಕಾಗುತ್ತದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS