ಹುಷಾರ್.. ಹೆಪಟೈಟಿಸ್ ಬಗ್ಗೆ ಬೇಡ ಉದಾಸೀನ

Hepatitis--01

ಯಕೃತಿನ ಸಿರೊಸಿಸ್ ಕೇವಲ ಮದ್ಯವ್ಯಸನಿಗಳಿಗೆ ಮಾತ್ರ ಬರುವುದಿಲ. ಎಲ್ಲರಿಗೂ ಬರಬಹುದು. ನಮ್ಮ ದೇಶದಲ್ಲಿ ಸುಮಾರು 75 ಲಕ್ಷ ಜನ ಹೆಪಟೈಟಿಸ್ `ಸಿ’ಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ.90ರಷ್ಟು ಪ್ರಕರಣಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸುವುದಿಲ್ಲ ಎಂದು ತಜ್ಞ ವೈದ್ಯರು ಹೇಳುತ್ತಾರೆ. ಏಸ್ಟೆರ್ ಐಎಲ್‍ಸಿಯ ಕನ್ಸಲ್ಟೆಂಟ್ ಆಗಿರುವ ಡಾ. ಸೋನಲ್ ಅಸ್ತಾನಾ ಹೀಗೆಂದರು, ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿ ಶೇ.2ರಷ್ಟು ಜನರು ಹೆಪಟೈಟಿಸ್ ಸಿ ವೈರಸ್‍ನ ಸೋಂಕಿಗೆ ಒಳಗಾಗಿದ್ದಾರೆ ಹೆಪಟೈಟಿಸ್ ಬಿ ಮತ್ತು ಸಿ ವೈರಸ್‍ನಿಂದ ಸಾಮಾನ್ಯ ಮತ್ತು ತೀವ್ರ (ದೀರ್ಘಕಾಲದ) ಸೋಂಕು ಉಂಟಾಗಬಹುದು. ಸೋಂಕು ಉಂಟಾದ ನಂತರ, ಈ ವೈರಸ್‍ಗಳು ಯಕೃತ್‍ನಲ್ಲಿ ಬಹುಕಾಲ ಉಳಿಯಲಿವೆ, ಈ ಸಮಯದಲ್ಲಿ ಯಕೃತ್ತಿಗೆ ಹಾನಿಯಾಗಲಿದೆ ಮತ್ತು ಇದರಿಂದ ಯಕೃತ್ ವೈಫಲ್ಯವೂ ಆಗಬಹುದು. ಜಗತ್ತಿನಲ್ಲಿ ಯಕೃತ್ತಿನ ಕ್ಯಾನ್ಸರಿಗೆ ಹೆಪಟೈಟಿಸ್ ಬಿ ಮತ್ತು ಸಿಯು ಪ್ರಮುಖವಾದ ಕಾರಣಗಳಾಗಿವೆ ಎಂದು ಅವರು ವಿವರಿಸಿದ್ದಾರೆ.

ವೈರಲ್ ಹೆಪಟೈಟಿಸ್ ಎನ್ನುವುದು ಜಗತ್ತಿನಾದ್ಯಂತ ಯಕೃತ್ ಅಸ್ವಸ್ಥತೆಗೆ ಪ್ರಮುಖವಾಗಿ ಕಾರಣವಾಗುವ ಅಂಶವಾಗಿದೆ. ವಿಶ್ವ ಆರೋಗ್ಯ ಸಂಘಟನೆ
(ಡಬ್ಲ್ಯುಎಚ್‍ಒ)ಯ ಅಂದಾಜಿನ ಪ್ರಕಾರ ಜಗತ್ತಿನಾದ್ಯಂತ ಸುಮಾರು 32 ಕೋಟಿ ಜನರು ತೀವ್ರತರಹದ ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದರಲ್ಲಿ ಶೇ.10ಕ್ಕಿಂತ ಕಡಿಮೆ ಜನರಿಗೆ ಹೆಪಟೈಟಿಸ್ ಬಿ ಮತ್ತು ಸಿಗೆ ಒಳಗಾಗಿದ್ದಾರೆಂದು ತಿಳಿದಿದೆ ಎಂದು ಅಂದಾಜಿಸಲಾಗಿದೆ.
ಶೇ.10ರಷ್ಟು ಜನರು ಮಾತ್ರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಮರಣಾಂತಿಕ ವೈರಸ್‍ನಿಂದ ಪಾರಾಗಲು ಮೊದಲು ಮಾಡಬೇಕಿರುವುದು ಜನರಲ್ಲಿ ಸೋಂಕಿನ ಅಸ್ತಿತ್ವ ಕಂಡುಹಿಡಿಯುವ ಪರೀಕ್ಷೆಯಾಗಿದೆ. ಕೇವಲ ಒಂದು ಸರಳ ರಕ್ತದ ಪರೀಕ್ಷೆಯ ಮೂಲಕ ಸಾಮಾನ್ಯ ಪರೀಕ್ಷೆಯನ್ನು ನಡೆಸಬಹುದಾಗಿದೆ. ಎಲ್ಲಾದರೂ ವ್ಯಕ್ತಿಯೊಬ್ಬರಲ್ಲಿ ಹೆಪಟೈಟಿಸ್ ಬಿ ಅಥವಾ ಸಿ ಪತ್ತೆಯಾದರೆ ಯಾವ ಹಂತದಲ್ಲಿ ಸೋಂಕು ಇದೆ ಎಂದು ತಿಳಿಯಲು ಮತ್ತಷ್ಟು ಪರೀಕ್ಷೆಗಳನ್ನು ನಡೆಸಬೇಕಾಗಬಹುದು. ನಕಾರಾತ್ಮಕ ಹೆಪಟೈಟಿಸ್ ಬಿ ಇರುವವರು ಹೆಪಟೈಟಿಸ್ ಬಿ ಲಸಿಕೆಯ ಪ್ರಯೋಜನ ಪಡೆಯಬಹುದಾಗಿದೆ, ಇದು 6 ತಿಂಗಳ ಅವಧಿಯಲ್ಲಿ ನೀಡುವ ಮೂರು ಚುಚ್ಚುಮದ್ದಾಗಿದೆ. ಹೆಪಟೈಟಿಸ್ ಸಿಗೆ ಈಗ ಯಾವುದೇ ಲಸಿಕೆ ಲಭ್ಯವಿಲ್ಲ ಎಂದು ಏಸ್ಟೆರ್ ಐಎಲ್‍ಸಿಯ ಕನ್ಸಲ್ಟೆಂಟ್ ಸರ್ಜನ್ ಆಗಿರುವ ಡಾ. ಜಯಂತ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದ 56 ವರ್ಷ ಪ್ರಾಯದ ಟೀಟೋಟಲೆರ್ ಆಗಿರುವ ಹರೀಶ್ ಒಂದು ವರ್ಷದ ಹಿಂದೆಯೇ ಸಿರೋಸಿಸ್ ರೋಗಕ್ಕೆ ಒಳಗಾಗಿದ್ದರು. ಕಿಡ್ನಿ ಕಸಿಗಾಗಿ ಅವರನ್ನು ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಅವರಲ್ಲಿ ತೀವ್ರ ತರಹದ ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ಇರುವುದು ಅರಿವಾಯಿತು.
ಯಕೃತ್ ವೈಫಲ್ಯದ ಯಾವುದೇ ಸೂಚನೆ ಅವರ ಅರಿವಿಗೆ ಬಂದಿಲ್ಲದಿದ್ದರೂ, ಅವರ ಯಕೃತ್ ತೀವ್ರವಾಗಿ ಹಾನಿಗೀಡಾಗಿತ್ತು. ದುರದೃಷ್ಟವೆಂದರೆ ಅವರ ಅಸ್ವಸ್ಥತೆಯಿಂದ ಯಕೃತ್ ಮತ್ತು ಕಿಡ್ನಿ ವೈಪಲ್ಯವಾಗಿತ್ತು. ಇವರ ಮುಂದೆ ಇದ್ದ ಸಂಭಾವ್ಯ ಚಿಕಿತ್ಸೆ ಆಯ್ಕೆಯೆಂದರೆ ಎರಡು ಅಂಗಗಳನ್ನು ಕಸಿ ಮಾಡುವುದಾಗಿತ್ತು.

ಅವರನ್ನು ಮೌಲ್ಯಮಾಪನ ಮಾಡಲಾಗಿತ್ತು ಮತ್ತು ಅವರನ್ನು ಕಾಯುವಿಕೆಯ ಪಟ್ಟಿಯಲ್ಲಿ ಇಡಲಾಯಿತು. ಅದು ಸುಮಾರು ಒಂದು ವರ್ಷ ಕಾಲ ಕಾಯಬೇಕಾಯಿತು. ಈ ಕಾಯುವಿಕೆಯಲ್ಲಿ ಅವರು ತೀವ್ರ ತರಹದ ಅಪೌಷ್ಟಿಕತೆಯಿಂದ ಸುಮಾರು 15 ಕೆ.ಜಿ. ತೂಕ ಕಳೆದುಕೊಂಡರು. ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಕಾಮಲೆ ಮತ್ತು ಇತರೆ ಹಲವು ತೊಂದರೆಗಳಿಂದ ಸಾಕಷ್ಟು ಬಳಲಿದರು.  ಹಲವು ವರ್ಷಗಳ ಹಿಂದೆಯೇ ಅವರಲ್ಲಿ ಹೆಪಟೈಟಿಸ್ ಬಿ ಮತ್ತು ಸಿ ಗುರುತಿಸಲು ಸಾಧ್ಯವಾಗಿದ್ದರೆ, ಬಹುಶಃ ಅವರಿಗೆ ಯಕೃತ್ ಕಾಯಿಲೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದಾಗಿತ್ತು ಮತ್ತು ಯಕೃತಿನ ತೊಂದರೆಯು ಈ ಹಂತದವರೆಗೆ ಬೆಳೆಯುತ್ತಿರಲಿಲ್ಲ ಮತ್ತು ಇವರಿಗೆ ಕಿಡ್ನಿ ಕಸಿಯ ಜೊತೆ ಯಕೃತ್ ಕಸಿ ಮಾಡಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ.

ಯಕೃತ್ ಹಾನಿಗೆ ಒಳಗಾಗುವ ಆರಂಭಿಕ ಸಮಯದಲ್ಲಿ ಹೆಪಟೈಟಿಸ್ ಬಿ ಮತ್ತು ಸಿ ಪತ್ತೆಗೆ ಸರಳವಾದ ರಕ್ತದ ಪರೀಕ್ಷೆಯನ್ನು ಮಾಡಬೇಕಿತ್ತು. ಸುಮಾರು 10 ತಿಂಗಳು ಕಳೆದ ಬಳಿಕ ಹರೀಶ್ ಅವರಿಗೆ ಯಕೃತ್ ಮತ್ತು ಕಿಡ್ನಿಯ ಸಂಯೋಜಿತ ಕಸಿಯನ್ನು ಮಾಡಲಾಯಿತು. ಇದು ಸಂಕೀರ್ಣವಾದ ಮತ್ತು 13 ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯಾಗಿದ್ದು, ಇದನ್ನು ಏಸ್ಟೆರ್ ಸಿಎಂಐ ಆಸ್ಪತ್ರೆ, ಬೆಂಗಳೂರಿನ ನುರಿತ ವೈದ್ಯರ ತಂಡ ಮತ್ತು ಇಂಟಿಗ್ರೆಟೆಡ್ ಲಿವರ್ ಕೇರ್ ಟೀಮ್ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿತ್ತು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತ ಅಥವಾ ರಕ್ತದ ಉತ್ಪನ್ನವನ್ನು ಬಳಸಲಿಲ್ಲ. ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳಲು ಹರೀಶ್‍ಗೆ ಸುಮಾರು 2 ವಾರ ಬೇಕಾಯಿತು. ಅವರ ಹೊಸ ಯಕೃತ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲು ಆರಂಭಿಸಿದ ನಂತರ ಅವರ ಜೀರ್ಣಕ್ರಿಯೆ ಉತ್ತಮಗೊಂಡಿತ್ತು ಮತ್ತು ಸುಮಾರು 4 ತಿಂಗಳಲ್ಲಿ ಅವರು ಮೊದಲಿನ ತೂಕವನ್ನು ಪಡೆದರು. ರೋಗ ನಿರೋಧಕ ಚಿಕಿತ್ಸೆಯ ಬಳಿಕ ಅವರ ಹೆಪಟೈಟಿಸ್ ಸಿ ಗುಣವಾಯಿತು.

ಕಸಿ ಮಾಡಿದ ಅಂಗಗಳು ಕಾರ್ಯನಿರ್ವಹಣೆಯನ್ನು ನಿಲ್ಲಿಸುವುದನ್ನು ತಡೆಯಲು, ನಿರಾಕರಣೆಗೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಅವರಿಗೆ ಔಷಧ ನೀಡುವುದರ ಜೊತೆಗೆ ಹೈಪಟೈಟಿಸ್ ಬಿಗೆ ಚಿಕಿತ್ಸೆ ನೀಡುವುದನ್ನು ಮುಂದುವರೆಸಲಾಯಿತು. ಅವರ ರಕ್ತದಲ್ಲಿ ಹೆಪಟೈಟಿಸ್ ಬಿ ವೈರಸ್ ಪ್ರಮಾಣವು ಗುರುತಿಸಲು ಸಾಧ್ಯವಾಗದಷ್ಟು ಪ್ರಮಾಣಕ್ಕೆ ಬಂದಿದೆ. ಹರೀಶ್ ಅವರು ಸರಿಯಾದ ಸಮಯಕ್ಕೆ ರೋಗ ನಿರ್ಣಯಕ್ಕೆ ಒಳಗಾಗಿರುವುದರಿಂದ ಮತ್ತು ಸರಿಯಾದ ಸಮಯಕ್ಕೆ ಕಸಿಗೆ ಬೇಕಾದ ಅಂಗವನ್ನು ಪಡೆದಿರುವುದರಿಂದ ಅದೃಷ್ಟವಂತರು. ಕೆಲವೇ ತಿಂಗಳು ವಿಳಂಬವಾಗಿದ್ದರೂ ಅವರು ಬದುಕುತ್ತಿರಲಿಲ್ಲ ಎಂದು ಬೆಂಗಳೂರಿನ ಏಸ್ಟೆರ್ ಸಿಎಂಐ ಆಸ್ಪತ್ರೆಯ ಹೆಪಟೊಲೊಜಿ ಮತ್ತು ಯಕೃತ್ ಕಸಿ ವಿಭಾಗದ ಮಾರ್ಗದರ್ಶಕ ಡಾ. ಕೈಸೆರ್ ರಾಜಾ ಹೇಳುತ್ತಾರೆ.

ಹರೀಶ್ ಅವರು ವೈರಲ್ ನಿರೋಧಕ ಚಿಕಿತ್ಸೆ ಪಡೆದಿರುವುದರಿಂದ ಹೆಪಟೈಟಿಸ್ ಸಿಯಿಂದ ಗುಣಮುಖರಾದರು. ಕಸಿ ಮಾಡಿದ ಅಂಗಗಳು ನಿರಾಕರಣೆಗೆ ಒಳಗಾಗುವುದನ್ನು ತಪ್ಪಿಸುವ ಸಲುವಾಗಿ ಅವರು ಹೆಪಟೈಟಿಸ್ ಬಿಗೆ ಚಿಕಿತ್ಸೆ ತೆಗೆದುಕೊಳ್ಳುವುದನ್ನು ಮುಂದುವರೆಸಿದರು ಎಂದು ಹೆಪಟೊಲೊಜಿಸ್ಟ್ ಮಾರ್ಗದರ್ಶಕರಾದ ಮಲ್ಲಿಕಾರ್ಜುನ್ ಸಖ್ ಪಾಲ್ ಹೇಳುತ್ತಾರೆ. ಯಕೃತ್‍ನ ಸಿರಿಯೋಸಿಸ್ ಪ್ರಗತಿಯನ್ನು ತಪ್ಪಿಸಲು ಹೆಪಟೈಟಿಸ್ ಸಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಬಹುದು ಎಂದು ಡಾ. ಸಖ್ ಪಾಲ್ ಹೇಳುತ್ತಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin