ಗೋ ಕಳ್ಳಸಾಗಣೆ ಆರೋಪದ ಮೇಲೆ ನಾಲ್ವರು ಯುವಕರಿಗೆ ಥಳಿತ

Cow-c-01

ಬೇಟುಲ್ (ಮ.ಪ್ರ.), ಆ.3-ಗೋ ಕಳ್ಳಸಾಗಣೆ ಆರೋಪದ ಮೇಲೆ ನಾಲ್ವರು ಯುವಕರನ್ನು ಗುಂಪೊಂದು ಹೀನಾಯವಾಗಿ ಥಳಿಸಿರುವ ಘಟನೆ ಮಧ್ಯಪ್ರದೇಶದ ಬೇಟುಲ್ ಜಿಲ್ಲೆಯ ಬುಡಕಟ್ಟು ಗ್ರಾಮವೊಂದರಲ್ಲಿ ನಡೆದಿದೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಹಲ್ಲೆಗೆ ಒಳಗಾದ ಗೋ ಕಳ್ಳಸಾಗಣೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಹಲ್ಲೆಕೋರರಿಗಾಗಿ ಶೋಧ ಮುಂದುವರಿದಿದೆ.
ಗೋ ಕಳ್ಳಸಾಗಣೆ ಆರೋಪದ ಮೇಲೆ ಸಿಕ್ಕಿಬಿದ್ದ ನಾಲ್ವರು ತರುಣರನ್ನು ಕಟ್ಟಿ ಹಾಕಿದ ಗುಂಪೊಂದು ಗ್ರಾಮಸ್ಥರ ಮುಂದೆ ಭೀಕರವಾಗಿ ಥಳಿಸುತ್ತಿರುವ ದೃಶ್ಯಗಳು ವೀಡಿಯೋದಲ್ಲಿದೆ.

ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಪೊಲೀಸರು ಗೋ ಕಳ್ಳಸಾಗಣೆದಾರರ ಮತ್ತು ಹಲ್ಲೆಕೋರರ ವಿರುದ್ಧ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin