ಚಿಕ್ಕಮ್ಮನ ಸಾವಿನಿಂದ ನೊಂದು ಯುವಕ ಆತ್ಮಹತ್ಯೆ

ಬಾಗಲಕೋಟೆ, ಆ.03-ಚಿಕ್ಕಮ್ಮನ ಸಾವಿನಿಂದ ನೊಂದ ಯುವಕನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ.
ಇಳಕಲ್‍ನ ಯಶೋದತ್ತ ಭವನ ಸಮೀಪದ ನಿವಾಸಿ ಸುಜಾತಾ ಬಸವರಾಜ್ ಅಂಗಡಿ (35) ಎಂಬುವರು ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಸುಜಾತ ಮೂಲತಃ ಕುಷ್ಟಗಿ ತಾಲೂಕಿನ ರಾಯಚೂರು ಜಿಲ್ಲೆಯವರಾಗಿದ್ದು, ಇಳಕಲ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ರಾತ್ರಿ ಕುಟುಂಬದವರೊಂದಿಗೆ ಊಟ ಮಾಡಿದ ಸುಜಾತ ನಂತರ ಮಲಗುವ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಘಟನೆ ನಡೆದ ಕೆಲವೇ ನಿಮಿಷದ ಅಂತರದಲ್ಲಿ ಸುಜಾತ ಅವರ ಅಕ್ಕನ ಮಗ ವಿವೇಕ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕುಷ್ಟಗಿಯಲ್ಲಿ ವಾಸವಾಗಿದ್ದ ವಿವೇಕ್ ಚಿಕ್ಕಮ್ಮನ ಸಾವಿನ ವಿಷಯ ತಿಳಿದು ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸುದ್ದಿ ತಿಳಿದ ಇಳಕಲ್ ಪಿಎಸ್‍ಐ ಸುನೀಲ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin