ಚಿನ್ನದ ಜಾಗತಿಕ ಬೇಡಿಕೆ ಕುಸಿತ

Gold-01

ಮುಂಬೈ, ಆ.3-ಈ ವರ್ಷದ ಏಪ್ರಿಲ್-ಜೂನ್ ತ್ರೈಮಾಸಿಕ ಅವಧಿಯಲ್ಲಿ ಜಾಗತಿಕ ಚಿನ್ನದ ಬೇಡಿಕೆ ಶೇ.10 ರಿಂದ 953 ಟನ್ನುಗಳಿಗೆ ಕುಸಿದಿದೆ. ವಿನಿಮಯ ವ್ಯಾಪಾರೀಕೃತ ನಿಧಿಗಳಿಗೆ(ಎಟಿಎಫ್‍ಗಳು) ಒಳಹರಿಯುವಿಕೆಯ ಪ್ರಮಾಣದಲ್ಲಿ ಗಮನಾರ್ಹ ಕುಸಿತದಿಂದಾಗಿ ಬಂಗಾರದ ಬೇಡಿಕೆ ಇಳಿಮುಖವಾಗಿದೆ ಎಂದು ವಿಶ್ವ ಚಿನ್ನ ಮಂಡಳಿ (ಡಬ್ಲ್ಯುಜಿಸಿ) ವರದಿ ತಿಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಚಿನ್ನದ ಒಟ್ಟು ಬೇಡಿಕೆಯು 1,055.6 ಟನ್ನುಗಳಷ್ಟಿತ್ತು. ಆ ಅವಧಿಗೆ ಹೋಲಿಸಿದಲ್ಲಿ ಹೂಡಿಕೆ ಬೇಡಿಕೆಯು ಶೇ.34ರಿಂದ 297 ಟನ್ನುಗಳಷ್ಟು ಕುಸಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin