ಜಡೆ ಕತ್ತರಿಸುವ ಮಾಟಗಾತಿ ಎಂಬ ಶಂಕೆ ಹಿನ್ನೆಲೆಯಲ್ಲಿ ವಿಧವೆಯ ಹತ್ಯೆ

Women-Killed--01

ಲಕ್ನೋ, ಅ.3-ಉತ್ತರ ಪ್ರದೇಶದ ಆಗ್ರಾದ ಮೇಗಾತ್‍ನಲ್ಲಿ ಮಹಿಳೆಯರ ಜಡೆ ಕತ್ತರಿಸುವ ನಿಗೂಢ ಪ್ರಕರಣಗಳು ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿರುವಾಗಲೇ, ಈ ಕೃತ್ಯ ನಡೆಸುವ ಮಾಟಗಾತಿ ಎಂಬ ಶಂಕೆಯಿಂದ ಗ್ರಾಮಸ್ಥರು 62 ವರ್ಷದ ವಿಧವೆಯೊಬ್ಬಳನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಗ್ರಾಮದಲ್ಲಿ ನಡೆದಿದೆ.  62 ವರ್ಷದ ವೃದ್ಧೆ ಮಾನ್‍ದೇವಿ ಗ್ರಾಮಸ್ಥರಿಂದ ಹಲ್ಲೆಗೆ ಒಳಗಾಗಿ ಮೃತಪಟ್ಟ ವಿಧವೆ.   ಈ ಗ್ರಾಮದಲ್ಲಿ ಮಹಿಳೆಯರ ತಲೆಗೂದಲು ಮತ್ತು ಜಡೆಗಳನ್ನು ಯಾರೋ ಕತ್ತರಿಸುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಬೆಳಗಾಗುವುದರೊಳಗೆ ಮಹಿಳೆಯರ ಕೂದಲು ಮಾಯಾವಾಗುತ್ತಿತ್ತು.

ಇದೇ ಸಂದರ್ಭದಲ್ಲಿ ಅಬ್‍ನೆರ ಪ್ರದೇಶದಲ್ಲಿರುವ ಮಂಗ್ರೋಲ್ ಚಾಟ್ ಗ್ರಾಮದಲ್ಲಿ ಲಾಲ್‍ಸಿಂಗ್ ಎಂಬುವರ ಪತ್ನಿ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ಅಸ್ವಸ್ಥರಾಗಿದ್ದ ಆಕೆ ಬೆಳಗ್ಗೆ ಎದ್ದು ನೋಡಿದಾಗ ತಲೆ ಕೂದಲನ್ನು ಕತ್ತರಿಸಿರುವುದು ಕಂಡುಬಂದಿತು.  62 ವರ್ಷದ ಮಾನ್‍ದೇವಿ ರಾತ್ರಿ ಹೊಲದಲ್ಲಿ ಬಹಿರ್ದೆಸೆಗೆ ಹೋಗಿ ವಾಪಸ್ ಬರುವಾಗ ಅಕಸ್ಮಿಕವಾಗಿ ಬೇರೊಬ್ಬರ ಮನೆ ಪ್ರವೇಶಿಸಿದ್ದಾರೆ. ಬಿಳಿ ಸೀರೆ ಧರಿಸಿದ್ದ ಮತ್ತು ಕೆದರಿದ್ದ ತಲೆಗೂದಲನ್ನು ನೋಡಿ ಮಗುವೊಂದು ಭಯದಿಂದ ಕಿರುಚಿದೆ. ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಜಡೆ ಕತ್ತರಿಸುವ ಮಾಟಗಾತಿ ಈಕೆಯೇ ಎಂದು ನಂಬಿ ಆಕೆಯ ಮೇಲೆ ತೀವ್ರ ಹಲ್ಲೆ ಮಾಡಿದರು.  ಯಗೊಂಡ ವೃದ್ದೆ ಮೃತಪಟ್ಟಿದ್ದಾರೆ.   ಈ ಘಟನೆ ಸಂದೇಹಾಸ್ಪದವಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin