ಭಾರತ-ಪಾಕ್ ನಡುವೆ ಈಗ ಧ್ವಜಸಮರ..!

ಈ ಸುದ್ದಿಯನ್ನು ಶೇರ್ ಮಾಡಿ

India-Flag--01

ಅಮೃತಸರ (ಪಂಜಾಬ್), ಆ.3- ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವಾಗಲೇ ಉಭಯ ದೇಶಗಳ ನಡುವೆ ಮತ್ತೊಂದು ಸಂಘರ್ಷಕ್ಕೆ ಈಗ ಅಖಾಡ ಸಜ್ಜಾಗಿದೆ. ಯಾವ ದೇಶದ ಧ್ವಜ ಹೆಚ್ಚು ಎತ್ತರಕ್ಕೆ ಹಾರುತ್ತದೆ? ಭಾರತದ್ದೋ ಅಥವಾ ಪಾಕಿಸ್ತಾನದ್ದೋ? ಇಂಥದ್ದೊಂದು ಅಪರೂಪದ ಪೈಪೋಟಿಗೆ ಎರಡೂ ದೇಶಗಳ ಸೇನಾಧಿಕಾರಿಗಳು ಸನ್ನದ್ಧರಾಗಿದ್ದಾರೆ. ಅತ್ತಾರಿ-ವಾಘಾ ಗಡಿಯಲ್ಲಿ ಈ ಸ್ಪರ್ಧೆ ನಡೆಯಲಿದೆ.

ಕಳೆದ ಮಾರ್ಚ್‍ನಲ್ಲಿ ಅಮೃತಸರ ಅಭಿವೃದ್ದಿ ಟ್ರಸ್ಟ್ 360 ಅಡಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಈ ಪೈಪೋಟಿ ಆರಂಭಿಸಿತ್ತು. ಆದರೆ ಪ್ರಬಲ ಗಾಳಿಯಿಂದಾಗಿ ರಾಷ್ಟ್ರಧ್ವಜ ಹರಿದುಹೋದ ಹಿನ್ನೆಲೆಯಲ್ಲಿ ಖಾಯಂ ಬಾವುಟ ಹಾರಿಸುವುದು ನಿಂತಿತ್ತು. ಈಗ 120 ಅಡಿ ಅಗಲದ 400 ಅಡಿ ಎತ್ತರದಲ್ಲಿ ಆಗಸ್ಟ್ 14ರಂದು (ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆ) ಧ್ವಜ ಹಾರಿಸುವುದಾಗಿ ಇಸ್ಲಾಮಾಬಾದ್ ಘೋಷಿಸಿದೆ. ಅದಕ್ಕಾಗಿ ಧ್ವಜಸ್ತಂಭ ಸ್ಥಾಪನೆ ಇತ್ಯಾದಿ ಕಾರ್ಯಗಳು ಬಿರುಸಿನಿಂದ ಸಾಗಿವೆ.

ಇದಕ್ಕೆ ಪ್ರತಿಯಾಗಿ ಭಾರತವೂ ಸಹ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಲು ಅದಕ್ಕಿಂತಲೂ ಹೆಚ್ಚು ಅಳತೆಯ ತ್ರಿವರ್ಣ ಧ್ವಜವನ್ನು ಹಾರಿಸಲು ಸಿದ್ಧತೆ ನಡೆಸಿದೆ. ಈ ಧ್ವಜದ ಉದ್ದ ಮತ್ತು ಎತ್ತರದ ಮಾಹಿತಿಯಲ್ಲಿ ಬಹಿರಂಗಗೊಳಿಸಿಲ್ಲ. ಇದರೊಂದಿಗೆ ಎರಡೂ ದೇಶಗಳ ನಡುವೆ ಧ್ವಜಸಮರಕ್ಕೆ ಕಣ ಸಿದ್ದವಾಗಿದ್ದು, ಕುತೂಹಲ ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin