ಮೆಟ್ರೊ ಎಫೆಕ್ಟ್, ಬಿಎಂಟಿಸಿಗೆ ಬಿತ್ತು ಭಾರಿ ಹೊಡೆತ

ಈ ಸುದ್ದಿಯನ್ನು ಶೇರ್ ಮಾಡಿ

BMTC01

ಬೆಂಗಳೂರು,ಆ.3-ಮೆಟ್ರೊ ರೈಲು ಪ್ರಾರಂಭವಾದ ಮೇಲೆ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ಎರಡು ಲಕ್ಷ ಇಳಿಕೆಯಾಗಿದ್ದು ಸುಮಾರು ಪ್ರತಿದಿನ 5 ಲಕ್ಷ ರೂ.ನಷ್ಟು ಆದಾಯ ಕಡಿಮೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯ ಬಿಎಂಟಿಸಿ ಬಸ್‍ಗಳಲ್ಲಿ 52 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಒಟ್ಟಾರೆ ಸಾರಿಗೆ ಸಂಸ್ಥೆಗಳ ಬಸ್‍ಗಳಲ್ಲಿ 1.15 ಕೋಟಿ ಜನರು ಪ್ರಯಾಣಿಸುತ್ತಿದ್ದಾರೆ. ಮೆಟ್ರೊ ರೈಲಿನಿಂದ ಪ್ರತಿನಿತ್ಯ ಸುಮಾರು ಐದು ಲಕ್ಷ ರೂ. ಬಿಎಂಟಿಸಿ ಆದಾಯದಲ್ಲಿ ಕಡಿಮೆಯಾಗಿದೆ ಎಂದು ಹೇಳಿದರು.

ಬೆಂಗಳೂರಿನ ಸುತ್ತಮುತ್ತಲ 25 ಕಿ.ಮೀವರೆಗೂ ಬಿಎಂಟಿಸಿ ಬಸ್ ವ್ಯವಸ್ಥೆ ಒದಗಿಸಲಾಗುವುದು. ಎಲೆಕ್ಟ್ರಿಕ್ ಬಸ್‍ಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಕಳೆದ ಏಪ್ರಿಲ್ ಒಳಗೆ ನೀಡುವುದಾಗಿ ಹೇಳಿತ್ತು. ಆದರೆ ಇದುವರೆಗೂ ನೀಡಿಲ್ಲ ಎಂದರು.  ಮಡಿಕೇರಿ, ಪುತ್ತೂರು ನಗರಗಳನ್ನು ಹೊರತುಪಡಿಸಿ ರಾಜ್ಯದ ಎಲ್ಲ ನಗರಗಳಿಗೂ ಸಾರಿಗೆ ಸೌಲಭ್ಯ ಒದಗಿಸಲಾಗಿದೆ. ಕಳೆದ 4 ವರ್ಷಗಳಲ್ಲಿ 24,500 ಸಿಬ್ಬಂದಿ ನೇಮಕವಾಗಿದೆ. 40 ಬಸ್ ಡಿಪೋ ನಿರ್ಮಿಸಲಾಗಿದೆ ಹಾಗೂ 76 ಬಸ್ ನಿಲ್ದಾಣಗಳನ್ನು ನಿರ್ಮಿಸಿರುವುದಾಗಿ ರಾಮಲಿಂಗಾರೆಡ್ಡಿ ವಿವರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin