ಸಿಂಹಿಳೀಯರ ವಿರುದ್ಧ 2ನೇ ಟೆಸ್ಟ್, ಭಾರತ ಉತ್ತಮ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಕೊಲಂಬೋ, ಆ.3- ಸಂಘಟಿತ ಪ್ರದರ್ಶನದಿಂದ ಗಾಲೆ ಟೆಸ್ಟ್ ನಲ್ಲಿ ದಾಖಲೆಯ ಜಯ ಸಾಧಿಸಿ ಶುಭಾರಂಭ ಮಾಡಿರುವ ಭಾರತ ಎರಡನೆ ಟೆಸ್ಟ್ ನಲ್ಲಿ ಉತ್ತಮ ಆರಂಭ ಪಡೆದಿದೆ. ಇಲ್ಲಿನ ಸಿಂಹಿಳೀಯ ಸ್ಪೋಟ್ರ್ಸ್‍ಕ್ಲಬ್ (ಎಸ್‍ಎಸ್‍ಸಿ) ಮೈದಾನದಲ್ಲಿ ಆರಂಭವಾದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೆ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಶಿಖರ್ ದವನ್ ಮತ್ತು ಕನ್ನಡಿಗ ಕೆ.ಎಲ್.ರಾಹುಲ್ ಕಣಕ್ಕಿಳಿದು ಆತಿಥೇಯ ಬೌಲರ್‍ಗಳನ್ನು ಎದುರಿಸಿ ಉತ್ತಮ ಆರಂಭ ಒದಗಿಸಿದರು.

ಆದರೆ, ತಂಡದ ಮೊತ್ತ 56 ರನ್ ಆಗಿದ್ದಾಗ ಇನ್ನಿಂಗ್ಸ್‍ನ 10.1 ಓವರ್‍ನಲ್ಲಿ ದಿಲ್ಲೀರ್‍ವಾನ್ ಪೆರೇರಾ ಅವರ ಮೊದಲ ಓವರ್‍ನ ಮೊದಲ ಎಸೆತದಲ್ಲೇ ಎಲ್‍ಬಿಡಬ್ಲ್ಯೂ ಬಲೆಗೆ ದವನ್ (35) ಬಲಿಯಾದರು. ಆರಂಭಿಕ ಜೋಡಿಯನ್ನು ಬೇರ್ಪಡಿಸಿದ ಪೆರೇರಾ ತಂಡಕ್ಕೆ ಮೇಲುಗೈ ಒದಗಿಸಿಕೊಟ್ಟರು. ಮೊದಲ ಟೆಸ್ಟ್‍ನಲ್ಲಿ ಭರ್ಜರಿ ಶತಕ ಸಿಡಿಸಿ ಅದ್ಭುತ ಫಾರಂನಲ್ಲಿರುವ ದವನ್ 37 ಎಸೆತಗಳಲ್ಲಿ 1 ಸಿಕ್ಸ್‍ರ್, 4 ಬೌಂಡರಿ ಸಹಿತ 35 ರನ್ ಬಾರಿಸಿ ಔಟಾದರು.

ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಕೆ.ಎಲ್.ರಾಹುಲ್ ಸಂಪೂರ್ಣ ಫಿಟ್ ಆಗಿ ಮುಕುಂದ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿದು ಉತ್ತಮ ಆಟವಾಡಿದರು.
ಮೊದಲ ವಿಕೆಟ್‍ನಲ್ಲಿ 56 ರನ್ ಜತೆಯಾಟವಾಡಿ ಉತ್ತಮ ಆರಂಭ ನೀಡಿದರು. ಪತ್ರಿಕೆ ಮುದ್ರಣವಾಗುವ ಸಮಯದಲ್ಲಿ ಭಾರತ ವಿರಾಮಕ್ಕೂ ಮುನ್ನ 12.4 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 62 ರನ್ ಕಲೆ ಹಾಕಿತ್ತು. ರಾಹುಲ್ ಅಜೇಯ 25, ಪೂಜಾರ ಅಜೇಯ 2 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin