ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ : ಗ್ರ್ಯಾಂಡ್ ಜೂರಿ ಮೂಲಕ ತೀವ್ರ ತನಿಖೆ

Grand-jury

ವಾಷಿಂಗ್ಟನ್, ಆ.4-ಅಮೆರಿಕ ಅಧ್ಯಕ್ಷ ಚುನಾವಣೆಗಳಲ್ಲಿ ರಷ್ಯಾ ಹಸ್ತಕ್ಷೇಪ ಕುರಿತ ತನಿಖೆ ಈಗ ಹೊಸ ಆಯಾಮ ಪಡೆದುಕೊಂಡಿದೆ. ಎಫ್‍ಬಿಐ ಮಾಜಿ ನಿರ್ದೇಶಕ ಹಾಗೂ ವಿಶೇಷ ವಕೀಲ ರಾಬರ್ಟ್ ಮ್ಯುಲ್ಲೆರ್ ಈ ಪ್ರಕರಣದ ತನಿಖೆಗಾಗಿ ಗ್ರ್ಯಾಂಡ್ ಜೂರಿ (ಅಧಿಕೃತ ತನಿಖೆ ನಡೆಸಲು ಕಾನೂನುಬದ್ಧವಾಗಿ ರಚನೆಯಾದ ಉನ್ನತಾಧಿಕಾರಿ ಹೊಂದಿರುವ ಸಂಸ್ಥೆ) ನೆರವು ಪಡೆದಿದ್ದು, ವಿಚಾರಣೆ ಮತ್ತಷ್ಟು ತೀವ್ರಗೊಂಡಿದೆ.

ಅತ್ಯಂತ ದಕ್ಷ ಮತ್ತು ನಿಷ್ಠಾವಂತ ನ್ಯಾಯವಾದಿ ಎಂದು ಹೆಸರು ಪಡೆದಿರುವ ಮ್ಯುಲ್ಲೆರ್ ಈ ಹಗರಣದ ವಿಚಾರಣೆಯನ್ನು ಕ್ಷಿಪ್ರಗೊಳಿಸಿರುವುದರಿಂದ ತನಿಖೆ ಹೊಸ ಹಂತ ತಲುಪಿದೆ. 2016ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಪರಾಧಗಳ ಮೇಲೂ ಈ ತನಿಖೆ ಬೆಳಕು ಚೆಲ್ಲಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಹೊಸ ಗ್ರ್ಯಾಂಡ್ ಜ್ಯೂರಿ ಮೂಲಕ ವಿಶೇಷ ವಕೀಲರು ತನಿಖೆ ತೀವ್ರಗೊಳಿಸಿದ್ದಾರೆ ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶೇಷ ಕಾನೂನು ಸಲಹೆಗಾರ ಟೈ ಕೋಬ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin