ಎನ್‍ಕೌಂಟರ್’ನಲ್ಲಿ ಉಗ್ರ ಖತಂ, ಗ್ರೆನೇಡ್, ಎಲ್‍ಎಸ್‍ಆರ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Encounter--01

ಶ್ರೀನಗರ, ಆ.4-ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾಪಡೆಗಳ ಜೊತೆ ಇಡೀ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಹಿಜ್‍ಬುಲ್ ಮುಜಾಹಿದ್ದೀನ್ (ಎಚ್‍ಎಂ) ಉಗ್ರಗಾಮಿ ಸಂಘಟನೆಯ ಸ್ಥಳೀಯ ಭಯೋತ್ಪಾದಕನೊಬ್ಬ ಹತನಾಗಿದ್ದಾನೆ. ಈ ಎನ್‍ಕೌಂಟರ್ ಸಂದರ್ಭದಲ್ಲಿ ಆಕಸ್ಮಿಕ ಗುಂಡು ತಗುಲಿ ಅಪರಿಚಿತ ವ್ಯಕ್ತಿಯೊಬ್ಬ ಸಹ ಮೃತಪಟ್ಟಿದ್ದಾನೆ. ಈ ಕಾರ್ಯಾಚರಣೆಯಲ್ಲಿ ಕೆಲವು ಯೋಧರೂ ಗಾಯಗೊಂಡಿದ್ದಾರೆ.

ಹೊಸದಾಗಿ ಎಚ್‍ಎಂಗೆ ನೇಮಕಗೊಂಡಿದ್ದ ಯಾವರ್ ನಿಸ್ಸಾರ್ ಶೇರ್‍ಗುರ್ಜಿ ಅಲಿಯಾಸ್ ಅಲ್‍ಘಾಜಿ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಉಗ್ರ. ಈತ ಅನಂತನಾಗ್ ಜಿಲ್ಲೆಯವರು. ಹತನಾದ ಭಯೋತ್ಪಾದಕನಿಂದ ಒಂದು ಎಸ್‍ಎಲ್‍ಆರ್ (ಸೆಲ್ಫ್ ಲೋಡಿಂಗ್ ರೈಪಲ್), 2 ಮ್ಯಾಗಝೈನ್‍ಗಳು, 40 ಸುತ್ತು ಗುಂಡುಗಳು, ಒಂದು ಚೀನಿ ತಯಾರಿಕೆಯ ಹ್ಯಾಂಡ್ ಗ್ರೆನೇಡ್ ಹಾಗೂ ಪೌಚ್‍ನನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭದ್ರತಾ ಪಡೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಗುಂಡಿನ ಕಾಳಗದ ಸಂದರ್ಭದಲ್ಲಿ ಇನ್ನಿಬ್ಬರು ಉಗ್ರರು ಕತ್ತಲ್ಲಲ್ಲಿ ಪರಾರಿಯಾಗಿದ್ದು, ವ್ಯಾಪಕ ಶೋಧ ಮುಂದುವರಿದಿದೆ.  ಈ ಎನ್‍ಕೌಂಟರ್‍ನಲ್ಲಿ ರಾಷ್ಟ್ರೀಯ ರೈಫಲ್ಸ್‍ನ ರೈಫಲ್‍ಮ್ಯಾನ್ ರೋಹಿತ್ ಕುಮಾರ್ ಸೇರಿದಂತೆ ಇನ್ನಿಬ್ಬರಿಗೆ ಗಾಯಗಳಾಗಿವೆ. ಭಯೋತ್ಪಾದಕರು ಇರುವ ಸುಳಿವನ್ನು ಅರಿತು ಜಮ್ಮು ಮತ್ತು ಕಾಶ್ಮೀರ ಪೊಲೀಸರು, ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್‍ಪಿಎಫ್ ಯೋಧರು ಅನಂತನಾಗ್ ಜಿಲ್ಲೆಯ ಬಿಜ್‍ಬೆಹರಾದಲ್ಲಿ ಕನಿಬಾಲ್ ಗ್ರಾಮವನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ಉಗ್ರರು ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು. ಉಗ್ರ ನಿಸಾರ್ ಹತನಾಗಿ ಪರಾರಿಯಾಗುತ್ತಿದ್ದ ಭಯೋತ್ಪಾದಕರತ್ತ ಯೋಧರು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಮೋಟಾರ್ ಸೈಕಲ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನಿಗೆ ಗುಂಡು ತಗುಲಿ ಆತ ಮೃತಪಟ್ಟ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin