ಜಗಳವಾಡುವ ನಾಟಕವಾಡಿದ ಮಾಂಗಲ್ಯಸರ ಎಗರಿಸಿದ ಕಳ್ಳಿಯರು

ಈ ಸುದ್ದಿಯನ್ನು ಶೇರ್ ಮಾಡಿ

ಮಂಡ್ಯ, ಆ.4- ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನ ಜಗಳವಾಡುವ ನಾಟಕವಾಡಿದ ಚೋರಿಯರಿಬ್ಬರು ಮಹಿಳೆಯೊಬ್ಬರ ಮಾಂಗಲ್ಯಸರ ಕಸಿದು ಪರಾರಿಯಾಗಿರುವ ಘಟನೆ ಕೆಆರ್‍ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಆರ್‍ಎಸ್ ನಿವಾಸಿ ಕಮಲಮ್ಮ (45) ಸರ ಕಳೆದುಕೊಂಡವರು. ಶ್ರೀರಂಗಪಟ್ಟಣ ತಾಲೂಕಿನ ಮಜ್ಜಿಗೆಪುರ ರಸ್ತೆಯ ಸಿದ್ದಪ್ಪಾಜಿ ದೇವಾಲಯದ ಬಳಿ ಇಬ್ಬರು ಚೋರಿಯರು ಜಗಳವಾಡುವ ನಾಟಕ ಮಾಡಿಕೊಂಡು ಪರಸ್ಪರ ವಾಚಾಮಗೋಚರವಾಗಿ ಬೈದುಕೊಳ್ಳುತ್ತಿದ್ದರು.

ಅದೇ ಮಾರ್ಗವಾಗಿ ಸಾಗುತ್ತಿದ್ದ ಕಮಲಮ್ಮ ಕಿತ್ತಾಡುವವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.  ತಾಳಿ ಮೇಲಾಳೆ ನಾನಂತವಳಲ್ಲ ಎಂದು ಪರಸ್ಪರ ಕಿರುಚಾಡಿ ಕಮಲಮ್ಮನ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ತಾಳಿ ಸರವನ್ನು ಹಿಡಿದು ಆಣೆ ಮಾಡುವ ನೆಪದಲ್ಲಿ ಕಿತ್ತುಕೊಂಡು ಪೇರಿಕಿತ್ತಿದ್ದಾರೆ.  ವರಮಹಾಲಕ್ಷ್ಮಿ ಹಬ್ಬದ ಮುನ್ನಾ ದಿನವೇ ಮಾಂಗಲ್ಯಸರ ಕಳೆದುಕೊಂಡ ಕಮಲಮ್ಮ ಅವರು ಕೆಆರ್‍ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin