ಡಿಕೆಶಿ ಎಐಸಿಸಿಗೆ ಯಾವುದೇ ಹಣ ನೀಡಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01

ಬೆಂಗಳೂರು,ಆ.4- ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ಎಐಸಿಸಿಗೆ ಯಾವುದೇ ಹಣ ಬಂದಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಮೋತಿಲಾಲ್ ವೋರಾ ಸ್ಪಷ್ಟನೆ ನೀಡಿದ್ದಾರೆ. ಐಟಿ ದಾಳಿ ವೇಳೆಯಲ್ಲಿ ಪತ್ತೆಯಾದ ದಾಖಲೆಗಳಲ್ಲಿ ಎಐಸಿಸಿಗೆ ಮೂರು ಕೋಟಿ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ಉಲ್ಲೇಖವಾಗಿರುವ ವರದಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಅವರು ಯಾವುದೇ ಹಣ ಡಿಕೆಶಿ ಅವರಿಂದ ಹೈಕಮಾಂಡ್‍ಗೆ ಸಂದಾಯವಾಗಿಲ್ಲ. ಮಾಧ್ಯಮಗಳಲ್ಲಿ ಬರುತ್ತಿರುವ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ತಿಳಿಸಿದ್ದಾರೆ.

ಐಟಿ ದಾಳಿ ವೇಳೆ ಈಗಲ್‍ಟನ್ ರೆಸಾರ್ಟ್‍ನಲ್ಲಿ ಡೈರಿಯೊಂದು ಸಿಕ್ಕಿದ್ದು , ಡೈರಿಯ ಪ್ರಮುಖ ಪ್ರತಿಯನ್ನು ಡಿಕೆಶಿ ಅವರು ಹರಿದು ಹಾಕಿದ್ದಾರೆ ಎನ್ನಲಾಗಿದ್ದು , ಅದನ್ನು ಜೋಡಿಸಿ ನೋಡಿದಾಗ ಹಲವರಿಗೆ ಹಣ ಸಂದಾಯವಾಗಿರುವ ಅಂಶಗಳಿವೆ ಎನ್ನಲಾಗಿರುವ ವರದಿ ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರವಾಗಿತ್ತು.
ಈ ವಿಷಯವನ್ನು ಮೋತಿಲಾಲ್ ವೋರಾ ಅವರು ಸಾರಸಗಟಾಗಿ ಹಲ್ಲೆಗೆಳೆದಿದ್ದು , ಯಾವುದೇ ಹಣ, ಹೈಕಮಾಂಡ್‍ಗೆ ಸಂದಾಯವಾಗಿಲ್ಲ. ಆ ವರದಿ ಸತ್ಯಕ್ಕೆ ದೂರ ಎಂದು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin